ತೌಖ್ತೆಗೆ ನಲುಗಿದ ಕರಾವಳಿ : ಮೂರು ಜಿಲ್ಲೆಗಳಲ್ಲಿ ಮಳೆ ಅಬ್ಬರ, ಇಂದು ರೆಡ್‌ ಅಲರ್ಟ್‌

Team Udayavani, May 16, 2021, 7:30 AM IST

ತೌಖ್ತೆಗೆ ನಲುಗಿದ ಕರಾವಳಿ : ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಳೆ ಅಬ್ಬರ

ಉಡುಪಿ/ ಮಂಗಳೂರು : ತೌಖ್ತೆ ಚಂಡಮಾರುತದ ತೀವ್ರ ಪರಿಣಾಮ ಶನಿವಾರವೇ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಉಂಟಾಗಿದೆ. ಮುಂಜಾನೆಯಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಹಾನಿಯಾಗಿದೆ. ಕಡಲ ಕಿನಾರೆಯುದ್ದಕ್ಕೂ ಭೀಮ ಶಕ್ತಿಯ ಭಾರೀ ಗಾತ್ರದ ಅಲೆಗಳು ದಡವನ್ನು ನುಂಗಿಹಾಕಿವೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್‌ ಸರಬರಾಜು ಕಡಿತವಾಗಿದೆ.

ಉಡುಪಿ, ಬ್ರಹ್ಮಾವರ, ಕಾರ್ಕಳ, ಕಾಪು ಭಾಗದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗಿದೆ. ಕಡಲ್ಕೊರೆತ ತೀವ್ರ ಗೊಂಡಿದ್ದು, ಹಲವು ಮನೆಗಳು ಅಪಾಯ ದಲ್ಲಿವೆ. ಮರವಂತೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕೆಲವೇ ತಿಂಗಳ ಹಿಂದೆ ನಿರ್ಮಿಸಿದ್ದ ಮೀನು ಗಾರಿಕೆ ರಸ್ತೆ ಕೊಚ್ಚಿ ಹೋಗಿದೆ. ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಎರಡು ಅಂತಸ್ತಿನ ಮನೆ ಕೊಚ್ಚಿಹೋಗಿದೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೂ ಮೂರು ದಿನ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.
ಉಳ್ಳಾಲ ಸೋಮೇಶ್ವರದಲ್ಲಿ ನೀರು ಸುಮಾರು 100 ಮೀ. ಒಳಗೆ ನುಗ್ಗಿ ಮನೆಗಳು ಜಲಾ ವೃತವಾಗಿವೆ. ಸೋಮೇ ಶ್ವರ ರುದ್ರ ಪಾದೆ ಬಳಿ ಇರುವ ಹಿಂದೂ ರುದ್ರ ಭೂಮಿ ಭಾಗಶಃ ಸಮುದ್ರ ಪಾಲಾಗಿದೆ. ಮಲ್ಪೆ ಬಂದರಿನಿಂದ ಹೊರಟಿದ್ದ ಮೀನುಗಾರಿಕೆ ಬೋಟು ಮುಳುಗಿದ್ದು, ಅದರಲ್ಲಿದ್ದ ಬಿಹಾರ ಮೂಲದ ಇಬ್ಬರು ಯುವಕರು ಮಟ್ಟು ಬೀಚಿನಲ್ಲಿ ಸುರಕ್ಷಿತವಾಗಿ ದಡ ಸೇರಿದ್ದಾರೆ.

ಮೇ 18ರ ವರೆಗೆ ಮಳೆ
ಐಎಂಡಿ ಮಾಹಿತಿಯಂತೆ ತೌಖ್ತೆ ವೇಗ ಮೇ 16ರಂದು 115-125ರಿಂದ 140 ಕಿ.ಮೀ. ಇರಲಿದೆ. ಸಂಜೆ 6ಕ್ಕೆ 125-135ರಿಂದ 150 ಕಿ.ಮೀ. ಮತ್ತು ಮೇ 17ರಂದು ಬೆಳಗ್ಗೆ 6ಕ್ಕೆ 145-155ರಿಂದ 170 ಕಿ.ಮೀ., ಸಂಜೆ 6ಕ್ಕೆ 150-160ರಿಂದ 175 ಕಿ.ಮೀ. ಮತ್ತು ಮೇ 18ರ ಬೆಳಗ್ಗೆ 6ಕ್ಕೆ 150-160ರಿಂದ 175 ಕಿ.ಮೀ. ವೇಗ ಪಡೆಯುವ ಸಾಧ್ಯತೆ ಇದೆ.

ಇಂದು ರೆಡ್‌ ಅಲರ್ಟ್‌
ಕರಾವಳಿಯಲ್ಲಿ ಇನ್ನೂ 3 ದಿನಗಳ ಕಾಲ ಉತ್ತಮ ಮಳೆ ಸುರಿಯಲಿದ್ದು, ಭಾರತೀಯ ಹವಾಮಾನ ಇಲಾಖೆಯು ಮೇ 16ರಂದು ರೆಡ್‌ ಅಲರ್ಟ್‌ ಘೋಷಿಸಿದೆ. ಮೇ 17ರಂದು ಆರೆಂಜ್‌ ಮತ್ತು ಮೇ 18ರಂದು ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ. ತಾಸಿಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಟಾಪ್ ನ್ಯೂಸ್

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

AAP;  ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

AAP; ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

9

Crime: 4 ತಿಂಗಳಿನಲ್ಲಿ 1646 ಅಪರಾಧ ಪ್ರಕರಣ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

6-vitla

Vitla: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳರ ಕರಾಮತ್ತು; ಡಿ.ವಿ.ಆರ್ ಕೂಡಾ ಕದ್ದೊಯ್ದರು

rajnath singh

Indian Constitution ಪೀಠಿಕೆಯನ್ನು ಬದಲಾವಣೆ ಮಾಡಿದ್ದು ಕಾಂಗ್ರೆಸ್: ರಾಜನಾಥ್ ಸಿಂಗ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Gangwar; ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು

Udupi Gangwar; ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Udupi: ಎದೆ ನೋವಿನಿಂದ ವ್ಯಕ್ತಿ ಸಾವು

Udupi: ಎದೆ ನೋವಿನಿಂದ ವ್ಯಕ್ತಿ ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

AAP;  ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

AAP; ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

8-chikkodi

ರಾಜ್ಯಕ್ಕೆ ಬರುತ್ತಿದ್ದ ನೀರನ್ನು ತಡೆ ಹಿಡಿದ ಮಹಾ ಸರ್ಕಾರದ ಕ್ರಮಕ್ಕೆ ರೈತರು ಆಕ್ರೋಶ

12

Jackfruit: ಹಲಸಿನ ಹಣ್ಣಿನ ಬೆಲೆ ದುಬಾರಿ, ರೈತರ ಸಂತಸ

Chikkaballapur: ಇಳುವರಿ ಕುಸಿತ; ಮಾವಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ

Chikkaballapur: ಇಳುವರಿ ಕುಸಿತ; ಮಾವಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.