ಪತ್ತೇದಾರಿ ಪ್ರತಿಭೆಗಳಾಗಿ!


Team Udayavani, Aug 29, 2017, 6:15 AM IST

Ban29081703SJsh.jpg

ಶತ್ರು ದೇಶದವರು ನಡೆಸುವ ದುಷ್ಕೃತ್ಯಗಳನ್ನು ತಡೆಯಲು ಗಡಿಯಲ್ಲಿ ಸೈನಿಕರು ಸದಾ ಸನ್ನದ್ಧರಿರುತ್ತಾರೆ. ದೇಶದ ಒಳಗೆ ಜರುಗುವ ಅಪಘಾತ, ಕಳವು, ದರೋಡೆ, ಅಪಹರಣಗಳಂಥ ಅಪರಾಧಗಳ ತಡೆಗೆ ಪೊಲೀಸರಿದ್ದಾರೆ. ಹಾಗೆಯೇ ಉಗ್ರರ ದಾಳಿ, ಬಾಂಬ್‌ ಸ್ಫೋಟ, ಇತ್ಯಾದಿ ಭಯೋತ್ಪಾದಕ ಚಟುವಟಿಕೆಗಳ ನಿಗ್ರಹಕ್ಕೆ ಪೊಲೀಸರಿಗಿಂತ ಮುಂಚಿತವಾಗಿ ಮಾಹಿತಿ ಕಲೆಹಾಕಿ ಕ್ರಮಕ್ಕೆ ಯೋಜನೆ ರೂಪಿಸುವವರೇ ಗುಪ್ತಚರ ಅಧಿಕಾರಿಗಳು. ಈಗ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಗುಪ್ತಚರ ಇಲಾಖೆಯಲ್ಲಿ 1300 ಸಹಾಯಕ ಗುಪ್ತಚರ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ…

ಜನಸಂದಣಿಯಿಂದ ಗಿಜಿಗಿಡುವ ಮಾಲ್‌ನಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಅನಾಮಧೇಯ ಕರೆಯೊಂದು ಬರುತ್ತದೆ. ಪೊಲೀಸರಿಗೂ, ಮಾಲ್‌ನ ಮಾಲೀಕರಿಗೂ ದೊರೆತಿರುವ ಮಾಹಿತಿಯ ಪ್ರಕಾರ ಅದು ಇನ್ನೇನು ಕೆಲವೇ ನಿಮಿಷಗಳಲ್ಲಿ ಸಿಡಿಯಲಿದೆ. ಜರೂರಾಗಿ ಈಗ ಏನು ಮಾಡಬೇಕು? ದೇಶದ ರಾಜಕೀಯ ಮುಖಂಡನೊಬ್ಬ ಭಯೋತ್ಪಾದಕ ಚಟುವಟಿಕೆಗೆ ಸಾಥ್‌ ನೀಡುತ್ತಿದ್ದಾನೆಯೇ ಎಂದು ತಿಳಿಯುವುದು ಹೇಗೆ? ದೇಶದೊಳಗೆ ಉಗ್ರರು ನುಸುಳಿ¨ªಾರೆ, ಇಂತಿಂಥ ಕಡೆಯೇ ಅಡಗಿ¨ªಾರೆ ಎಂಬುದರ ಮಾಹಿತಿ ನೀಡುವವರಾದರೂ ಯಾರು?… ಈ ರೀತಿಯ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ ಕಾಣಿಸುವುದೇ ಗುಪ್ತಚರ ಇಲಾಖೆ! ಸರ್ಕಾರವೂ ಸೇರಿದಂತೆ ಅನೇಕ ಗುಪ್ತಚರ ಏಜೆನ್ಸಿಗಳು ಕರ್ತವ್ಯ ನಿರ್ವಹಿಸುತ್ತಿವೆ. ಇವು ದೇಶದಲ್ಲಿ ನಡೆಯಬಹುದಾದ, ನಡೆಯುವ ಅಹಿತಕರ ಘಟನೆಗಳ ಕುರಿತು ಮಾಹಿತಿ ಸಂಗ್ರಹಿಸಿ, ಅದನ್ನು ಹೇಗೆ ನಿಯಂತ್ರಿಸಬಹುದು ಎಂದೂ ಸಲಹೆ ನೀಡಿ, ಆ ವರದಿಯನ್ನು ಕೇಂದ್ರ ಗೃಹ ರಕ್ಷಣಾ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸುತ್ತಿರುತ್ತದೆ.ಇಂಥ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ 1300 ಸಹಾಯಕ ಗುಪ್ತಚರ (ಗ್ರೇಡ್‌ ||/ಎಕ್ಸಿಕ್ಯೂಟಿವ್‌) ಅಧಿಕಾರಿಯಾಗಲು ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ.

ಯಾರಿಗೆ ಎಷ್ಟು ಹುದ್ದೆ? 
ಸಾಮಾನ್ಯ ವರ್ಗ-   951
ಹಿಂದುಳಿದ ವರ್ಗ- 184
ಪರಿಶಿಷ್ಟ ಜಾತಿ/ಎಸ್ಸಿ-109
ಪರಿಶಿಷ್ಟ ವರ್ಗ/ಎಸ್ಟಿ-  56
ಇದರಲ್ಲಿ ಎಕÕ…-ಸರ್ವಿಸ್‌ ಮೆನ್‌ ಹುದ್ದೆಗಳನ್ನೂ ಸೇರಿಸಲಾಗಿದೆ.

ಅರ್ಹತೆ ಏನಿರಬೇಕು?
ಸಹಾಯಕ ಗುಪ್ತಚರ ಅಧಿಕಾರಿಯಾಗಲು ಯಾವುದೇ ಪ್ರಮಾಣೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್‌ ಕುರಿತಾಗಿ ಜ್ಞಾನ ಅಗತ್ಯ.

ವಯೋಮಿತಿ ಎಷ್ಟು?
– ಸಹಾಯಕ ಗುಪ್ತಚರ ಹುದ್ದೆಗೆ 18ರಿಂದ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ/ವರ್ಗಕ್ಕೆ ವಯೋಮಿತಿಯಲ್ಲಿ 5 ವರ್ಷ ಮತ್ತು ಹಿಂದುಳಿದ ವರ್ಗಕ್ಕೆ 3 ವರ್ಷ ಸಡಿಲಿಕೆಯಿದೆ.
–  ಸಹಾಯಕ ಗುಪ್ತಚರ ಹುದ್ದೆಗೆ ಅವರ ಕಾರ್ಯವೈಖರಿ ಆಧಾರದ ಮೇಲೆ ಸಂಬಳ ಮತ್ತು ಪದೋನ್ನತಿ ಮಾಡಲಾಗುತ್ತದೆ. ಪ್ರಸ್ತುತ 9300ರಿಂದ 34,800 ರುಪಾಯಿವರೆಗೆ ಸರ್ಕಾರ ಸಂಬಳ ನಿಗದಿಪಡಿಸಿದೆ. ಜೊತೆಗೆ ಗ್ರೇಡ್‌ ಅನುಗುಣವಾಗಿ 4200 ರು. ಹಾಗೂ ಕೆಲವು ಕೇಂದ್ರೀಯ ಸವಲತ್ತುಗಳು ದೊರೆಯುತ್ತವೆ.

ಆಯ್ಕೆ ಹೇಗೆ?
– ಅಭ್ಯರ್ಥಿಗಳು ಹುದ್ದೆ ಪಡೆಯಲು ಲಿಖೀತ ಪರೀಕ್ಷೆ ಹಾಗೂ ಸಂದರ್ಶನ ಎದುರಿಸಬೇಕಾಗುತ್ತದೆ. ಲಿಖೀತವಾಗಿ ಶ್ರೇಣಿ 1 ಮತ್ತು ಶ್ರೇಣಿ 2 ಎಂಬ 100 ಮತ್ತು 50 ಅಂಕಗಳ ಪರೀಕ್ಷೆ ಇರುತ್ತದೆ.
– ಶ್ರೇಣಿ 1ರಲ್ಲಿ ಆಬೆಕ್ಟಿವ್‌ ಮಾದರಿಯಲ್ಲಿ 25 ಪ್ರಶ್ನೆಗಳಿಗೆ ಉತ್ತರಿಸಬೇಕು.
– ಶ್ರೇಣಿ 2ರಲ್ಲಿ 30 ಅಂಕಗಳಿಗೆ ಪ್ರಬಂಧ ಮತ್ತು 20 ಅಂಕಗಳಿಗೆ ಇಂಗ್ಲಿಷ್‌ ಕಾಂಪ್ರನ್ಶನ್‌ ಬರೆಯಬೇಕು. ಪರೀಕ್ಷೆಯ ಅಂಕಗಳ ಆಧಾರದಲ್ಲಿಯೇ ಆಯ್ಕೆ ಸಾಧ್ಯ. (ಟ್ರೈನಿಂಗ್‌ ಸಮಯದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ.)
– ಬೆಂಗಳೂರು ಸೇರಿದಂತೆ ದೇಶದ 33 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?
ಸಹಾಯಕ ಗುಪ್ತಚರ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆನ್‌ಲೈನಿನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೊದಲಿಗೆ www.recruitmentonline.in/mha11/ನಲ್ಲಿ ಲಾಗಿನ್‌ ಆಗಿ, ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಅಗತ್ಯ ಮಾಹಿತಿಗಳನ್ನು ಅರಿತು ಅರ್ಜಿ ಸಲ್ಲಿಸಲು ಮುಂದಾಗಬೇಕು. ಬಳಿಕ ಬರುವ ಪರದೆಯಲ್ಲಿ ಹೊಸ ಅಥವಾ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ರಿಜಿಸ್ಟ್ರೇಷನ್‌ ನಂಬರ್‌ ನಮೂದಿಸಿ ಮುಂದುವರಿಯಿರಿ. ಹೊಸ ಅಭ್ಯರ್ಥಿಗಳಿಗೆ ಮುಂದಿನ ಪರದೆಯಲ್ಲಿ ರಿಜಿಸ್ಟ್ರೇಷನ್‌ ಫಾರಂವೊಂದು ತೆರೆದುಕೊಳ್ಳುತ್ತದೆ. ಅದರಲ್ಲಿ ಹೆಸರು, ಇ-ಮೇಲ್‌ ವಿಳಾಸ, ಲಿಂಗ, ವರ್ಗ, ಜನ್ಮದಿನಾಂಕ, ಮೊಬೈಲ್‌ ನಂಬರ್‌, ಹೊಂದಲಿರುವ ಹುದ್ದೆ ಇತ್ಯಾದಿ ಮಾಹಿತಿ ತುಂಬಿ, ದೃಶ್ಯದಲ್ಲಿರುವ ಕೋಡ್‌ ನಂಬರ್‌ ಬರೆದು ರಿಜಿಸ್ಟರ್‌ ಆಗಿ. ಬಳಿಕ ಬರುವ ಪರದೆಯಲ್ಲಿ ಪೋಷಕರ ಹೆಸರು, ತಮ್ಮ ವಿದ್ಯಾರ್ಹತೆ ಮತ್ತು ವಿಳಾಸ ಸಂಬಂಧಿಸಿದ ಪೂರಕ ಮಾಹಿತಿ ತುಂಬಿ ಪರೀಕ್ಷಾ ಸೆಂಟರ್‌ ನಮೂದಿಸಿ. ಮುಂದಿನ ಪರದೆಯಲ್ಲಿ ಭಾವಚಿತ್ರ ಮತ್ತು ಸಹಿ ಚಿತ್ರಪ್ರತಿಯನ್ನು ಅಪ್ಲೋಡ್‌ ಮಾಡಿ. ಮುಂದಿನ ಪರದೆಯಲ್ಲಿ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಿ ಮತ್ತು ಪಾವತಿಸಿದ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಫಾರಂ ನಂಬರ್‌, ಪಾಸ್‌ವರ್ಡ್‌ ನೆನಪಿನಲ್ಲಿಟ್ಟುಕೊಳ್ಳಿ. ಪರೀಕ್ಷೆಗೆ ತಯಾರಾಗಿ.

ಶುಲ್ಕ ಹಾಗೂ ಕೊನೆಯ ದಿನ
ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ 100 ರು. ಪರೀಕ್ಷಾ ಶುಲ್ಕ ನಿಗದಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್‌ 2 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ, 
http://mha.nic.in/sites/upload_files/mha/files/DetailedAdvtforACIOII_11082017%20exam.pdf ಸಂಪರ್ಕಿಸಿ.

 - ಎನ್‌. ಅನಂತನಾಗ್‌

ಟಾಪ್ ನ್ಯೂಸ್

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Crime News: ಕಾಸರಗೋಡು ಅಪರಾಧ ಸುದ್ದಿಗಳು

Crime News: ಕಾಸರಗೋಡು ಅಪರಾಧ ಸುದ್ದಿಗಳು

ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

Hiriadka ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

Udupi ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

BJP notice to Union Minister Sinha who did not come to campaign and did not vote

BJP: ಪ್ರಚಾರಕ್ಕೆ ಬರದ, ವೋಟ್‌ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Crime News: ಕಾಸರಗೋಡು ಅಪರಾಧ ಸುದ್ದಿಗಳು

Crime News: ಕಾಸರಗೋಡು ಅಪರಾಧ ಸುದ್ದಿಗಳು

ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

Hiriadka ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.