ವಿಜಯನಗರ ಕಾಲದ ಕದಳಿ ಶಾಸನ ಪತ್ತೆ

Team Udayavani, Mar 11, 2020, 10:41 PM IST

Shilasasana

ಶಿರ್ವ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಇಡೂರು-ಕುಂಜ್ಞಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕದಳಿ ಮಹಾಲಿಂಗೇಶ್ವರ ದೇವಾಲಯದ ಸಮೀಪ ಬರದಕಲ್ಲು ಬೋಳೆ ಎಂಬ ಸ್ಥಳದಲ್ಲಿ ಸುಮಾರು 85 ಸೆ.ಮೀ. ಅಗಲ ಮತ್ತು 135 ಸೆ.ಮೀ ಎತ್ತರದ ಅಪ್ರಕಟಿತ ಶಾಸನವೊಂದು ಪತ್ತೆಯಾಗಿದೆ ಎಂದು ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ| ಟಿ.ಮುರುಗೇಶಿ ತಿಳಿಸಿದ್ದಾರೆ.

ವಿಜಯನಗರ ಕಾಲದ ಶಾಸನ
ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಸಂಗಮ ರಾಜ ಮನೆತನದ ಬುಕ್ಕರಾಯನ ಆಳ್ವಿಕೆಯ ಕಾಲದ ಶಾಸನವಿದಾಗಿದೆ. ಆತನ ಆಳ್ವಿಕೆಯ ಕಾಲದಲ್ಲಿ ಗೋಪರಸ ಒಡೆಯನು ಬಾರಕೂರಿನ ರಾಜ್ಯ ಪಾಲನಾಗಿ ಆಳ್ವಿಕೆ ಯನ್ನು ನಡೆಸುತ್ತಿದ್ದನೆಂದು ಶಾಸನದಲ್ಲಿ ಹೇಳಲಾಗಿದೆ.

ಶಾಸನದ ಕಾಲ
ಶಕವರುಷ 1290 ನೆಯ ಕೀಲಕ ಸಂವತ್ಸರ ಎಂದು ಕಾಲವನ್ನು ಉಲ್ಲೇಖೀಸಿರುವುದರಿಂದ ಶಾಸನದ ಕಾಲ ಕ್ರಿ.ಶ. 1368ಕ್ಕೆ ಸರಿ ಹೊಂದುತ್ತದೆ. ಕಬ್ಬುನಾಡ ಏಳು, ಹಂನೆರೆಡು ಯೆಕ್ಕಲ ಬಳಿಯವರು, ನಾಡ ನಾಲ್ವರು ಮತ್ತು ಸೇನಭೋವ ತಿಪ್ಪ ಕೊಲ್ಲೂರ ಕೋಟೆಗೆ ಮುತ್ತಿಗೆ ಹಾಕಿದ್ದನ್ನು ಈ ಶಾಸನದಲ್ಲಿ ಪ್ರಸ್ಥಾಪಿಸಲಾಗಿದೆ. ಈ ಕಾಳಗದಲ್ಲಿ ಕಾಡದಿ ಮುತ್ತ ಎಂಬುವನು ವೀರಮರಣವನ್ನು ಹೊಂದಿದ ವಿಷಯವನ್ನು ಮತ್ತು ಆತನಿಗೆ ನೀಡಿದ ಮಾನ್ಯವನ್ನು ಶಾಸನದಲ್ಲಿ ವಿವರಿಸಲಾಗಿದೆ. ಆತನಿಗೆ ನೀಡಿದ ಮಾನ್ಯವನು ಬಾರಕೂರ ಸಭೆಯ ಮಾನ್ಯವೆಂದು ಶಾಸನದಲ್ಲಿ ಹೇಳಲಾಗಿದೆ. ಆದರೆ ಬಾರಕೂರ ಸಭೆಯ ಮಾನ್ಯವೆಂದರೆ ಏನು ಎನ್ನುವುದು ಸ್ಪಷ್ಟವಿಲ್ಲ.

ಕದಳಿ ಹೆಸರಿನ ಸ್ವಾರಸ್ಯ
ಶಾಸನ ಇರುವ ಕದಳಿಯನ್ನು ಶಾಸನದಲ್ಲಿ ಕಡುವಳಿ ಎಂದು ಕರೆಯಲಾಗಿದೆ. ಕದಳಿಯ ಮಹಾಲಿಂಗೇಶ್ವರನನ್ನು ಕಡುವಳಿ ಮಹಾದೇವನೆಂದು ಕರೆಯಲಾಗಿದೆ. ಅಂದರೆ ಕದಳಿಯ ಮೂಲರೂಪ ಕಡುವಳಿ ಯಾಗಿದ್ದು ಜನರ ಆಡುಮಾತಿನಲ್ಲಿ ಕಡುವಳಿ ಕದಳಿಯಾಗಿ ಬದಲಾಗಿರುವುದನ್ನು ಶಾಸನ ಸ್ಪಷ್ಟಪಡಿಸುತ್ತದೆ. ಈ ಶಾಸನಾಧ್ಯಯನದಲ್ಲಿ ಕದಳಿ ಶ್ರೀಧರ ಉಡುಪ, ರಮಾನಂದ ಮಧ್ಯಸ್ಥ, ಹೊಸೂರು ಮೂಕಾಂಬಿಕಾ ಹೈಸ್ಕೂಲಿನ ಮುಖ್ಯೋ ಪಾಧ್ಯಾಯ ಚಂದ್ರ ಶೆಟ್ಟಿ, ವಂಡಬಳ್ಳಿ ಸುಧಾಕರ ಶಟ್ಟಿ, ಕೊಲ್ಲೂರಿನ ಮುರಳೀಧರ ಹೆಗಡೆ, ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ಞಾ, ರಕ್ಷಿತಾ, ಸುರಕ್ಷಾ ಮತ್ತು ಸುಭಾಷ್‌ ಸಹಕರಿಸಿದ್ದರು.

ಟಾಪ್ ನ್ಯೂಸ್

Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು

Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು

5

Riyan Parag ಯೂಟ್ಯೂಬ್‌ ಹಿಸ್ಟರಿ ಲೀಕ್:‌ ʼಸಾರಾ ಆಲಿ, ಅನನ್ಯಾ ಪಾಂಡೆ ಹಾಟ್‌ʼ ಎಂದು ಸರ್ಚ್

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ಕುಂಭಕೋಡು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು

Lost Control: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು

Pune Porsche Car Crash: ರಕ್ತದ ಮಾದರಿ ಬದಲಾಯಿಸಲು 3 ಲಕ್ಷ ರೂ. ಪಡೆದ ವೈದ್ಯರು

Pune Porsche Car Crash: ರಕ್ತದ ಮಾದರಿ ಬದಲಾಯಿಸಲು 3 ಲಕ್ಷ ರೂ. ಪಡೆದಿದ್ದ ವೈದ್ಯರು

4

Arrested: ಲಿವ್‌ ಇನ್‌ ಸಂಗಾತಿ ಆತ್ಮಹತ್ಯೆ; ಐಆರ್‌ಎಸ್‌ ಅಧಿಕಾರಿ ಬಂಧನ

ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ

ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

Udupi ಗ್ಯಾಂಗ್‌ವಾರ್‌ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

Udupi ಗ್ಯಾಂಗ್‌ವಾರ್‌ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

“ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್‌ ಸ್ಪಂದನೆ’; ಸಲೀಂ ಅಹಮದ್‌

“ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್‌ ಸ್ಪಂದನೆ’; ಸಲೀಂ ಅಹಮದ್‌

BJP, ಎನ್‌ಡಿಎ ಗೆಲುವು ತಪ್ಪಿಸಲಾಗದು: ವಿಜಯೇಂದ್ರ

BJP, ಎನ್‌ಡಿಎ ಗೆಲುವು ತಪ್ಪಿಸಲಾಗದು: ವಿಜಯೇಂದ್ರ

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Mizoram: ಭಾರೀ ಮಳೆಯಿಂದ ಕಲ್ಲು ಕ್ವಾರಿ ಕುಸಿತ; ಕನಿಷ್ಠ 10 ಮಂದಿ ಮೃತ್ಯು, ಹಲವರು ನಾಪತ್ತೆ

Mizoram: ಭಾರೀ ಮಳೆಯಿಂದ ಕಲ್ಲು ಕ್ವಾರಿ ಕುಸಿತ; ಕನಿಷ್ಠ 10 ಮಂದಿ ಮೃತ್ಯು, ಹಲವರು ನಾಪತ್ತೆ

Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು

Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು

5

Riyan Parag ಯೂಟ್ಯೂಬ್‌ ಹಿಸ್ಟರಿ ಲೀಕ್:‌ ʼಸಾರಾ ಆಲಿ, ಅನನ್ಯಾ ಪಾಂಡೆ ಹಾಟ್‌ʼ ಎಂದು ಸರ್ಚ್

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ಕುಂಭಕೋಡು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು

Lost Control: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.