Cricket: ಭಾರತ-ಪಾಕಿಸ್ಥಾನ ಬದ್ಧ ವೈರಿಗಳ ಜಂಟಿ ಆತಿಥ್ಯ


Team Udayavani, Sep 25, 2023, 11:16 PM IST

cricekt

ಇಂಗ್ಲೆಂಡ್‌ ಮತ್ತು ಪ್ರುಡೆನ್ಶಿಯಲ್‌ ಕಂಪೆನಿ ಮೊದಲ 3 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬಳಿಕ ಈ ಕೂಟ ನಿಧಾನವಾಗಿ ಕ್ರಿಕೆಟ್‌ ಜನಕರ ನಾಡಿನಿಂದ ವಿಮುಖವಾಗತೊಡಗಿತು. ವಿಶ್ವದ ಎಲ್ಲ ಕ್ರಿಕೆಟ್‌ ರಾಷ್ಟ್ರಗಳಿಗೂ ಇದನ್ನು ವಿಸ್ತರಿಸಬೇಕೆಂಬ ಒತ್ತಡ ಬಂದಾಗ ಐಸಿಸಿ ಇದಕ್ಕೆ ಮಣಿಯಲೇಬೇಕಾಯಿತು.

ಇಲ್ಲಿನ ಮೊದಲ ಫ‌ಲಾನುಭವಿಗಳೆಂದರೆ ಭಾರತ ಮತ್ತು ಪಾಕಿಸ್ಥಾನ. ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದ ಈ ಎರಡು ದೇಶಗಳು ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಮೂಲಕ ಬಾಂಧವ್ಯ ವೃದ್ಧಿಸಿಕೊಳ್ಳುವುದು ದೂರದ ಮಾತೇ ಆಗಿದ್ದರೂ ಕೂಟ ಮಾತ್ರ ಅತ್ಯಂತ ಯಶಸ್ವಿಯಾಗಿ ನಡೆದದ್ದು ಸುಳ್ಳಲ್ಲ.

ರಿಲಯನ್ಸ್‌ ವಿಶ್ವಕಪ್‌
1987ರ ಈ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಪ್ರಾಯೋಜಿಸಿದ್ದು ರಿಲಯನ್ಸ್‌ ಕಂಪೆನಿ. ಇಂಗ್ಲೆಂಡ್‌ನ‌ಲ್ಲಿ ನಡೆದದ್ದು 60 ಓವರ್‌ಗಳ ಪಂದ್ಯವಾದರೆ, ಏಷ್ಯಾಕ್ಕೆ ಬರುವಾಗ ಇದು 50 ಓವರ್‌ಗಳಿಗೆ ಇಳಿದಿತ್ತು. ಅದೇ 8 ತಂಡಗಳ, 2 ಗ್ರೂಪ್‌ಗ್ಳ, 2 ಸುತ್ತಿನ ಮುಖಾಮುಖೀ ಇದಾಗಿತ್ತು. ಟೆಸ್ಟ್‌ ಮಾನ್ಯತೆ ಪಡೆದಿದ್ದ ಎಲ್ಲ 7 ರಾಷ್ಟ್ರಗಳು ನೇರ ಪ್ರವೇಶ ಪಡೆದ್ದಿವು. ಜಿಂಬಾಬ್ವೆ ಐಸಿಸಿ ಟ್ರೋಫಿ ಗೆದ್ದು ಸತತ 2ನೇ ವಿಶ್ವಕಪ್‌ ಆಡುವ ಅವಕಾಶ ಪಡೆಯಿತು. ಫೈನಲ್‌ನಲ್ಲಿ ಅದು ನೆದರ್ಲೆಂಡ್ಸ್‌ಗೆ ಸೋಲುಣಿಸಿತ್ತು.

ಭಾರತ ಹಾಲಿ ಚಾಂಪಿಯನ್‌ ಆಗಿದ್ದರಿಂದ ಸಹಜವಾಗಿಯೇ ನೆಚ್ಚಿನ ತಂಡವಾಗಿತ್ತು. ಗಡಿಯಾಚೆ ಪಾಕಿಸ್ಥಾನ ಫೇವರಿಟ್‌ ಎನಿಸಿತ್ತು. ಒಂದು ಸೆಮಿಫೈನಲ್‌ ಭಾರತಕ್ಕೆ (ಮುಂಬಯಿ), ಇನ್ನೊಂದು ಸೆಮಿಫೈನಲ್‌ ಪಾಕಿಸ್ಥಾನಕ್ಕೆ (ಲಾಹೋರ್‌) ಮೀಸಲಾಯಿತು. ಫೈನಲ್‌ ಆತಿಥ್ಯ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಪಾಲಾಯಿತು.

ಮತ್ತೆ ಕಪಿಲ್‌ ಸಾರಥ್ಯ
1983ರಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದ ಕಪಿಲ್‌ದೇವ್‌ ಅವರೇ ತಂಡದ ಸಾರಥಿಯಾಗಿದ್ದರು. ಕಪಿಲ್‌ ಸೇರಿ ಚಾಂಪಿಯನ್‌ ತಂಡದ 6 ಮಂದಿ ಆಟಗಾರರಿದ್ದರು. “ಎ’ ವಿಭಾಗದಿಂದ ಭಾರತ, ಆಸ್ಟ್ರೇಲಿಯ; “ಬಿ’ ವಿಭಾಗದಿಂದ ಪಾಕಿಸ್ಥಾನ-ಇಂಗ್ಲೆಂಡ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟವು. ಪಾಕಿಸ್ಥಾನಕ್ಕೆ ಲಾಹೋರ್‌ನಲ್ಲಿ, ಭಾರತಕ್ಕೆ ಮುಂಬಯಿಯಲ್ಲಿ ಉಪಾಂತ್ಯ ಪಂದ್ಯ ಆಡುವ ಅವಕಾಶ ಲಭಿಸಿದ್ದರಿಂದ ಆಗಲೇ ಇತ್ತಂಡಗಳ ನಡುವೆ ಫೈನಲ್‌ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಸಂಭವಿಸಿದ್ದೇ ಬೇರೆ.

ಲಾಹೋರ್‌ನಲ್ಲಿ ನಡೆದ ಮೊದಲ ಉಪಾಂತ್ಯದಲ್ಲಿ ಪಾಕಿಸ್ಥಾನ 18 ರನ್ನುಗಳಿಂದ ಆಸ್ಟ್ರೇಲಿಯಕ್ಕೆ ಶರಣಾಯಿತು. ಮರುದಿನ ಭಾರತ 35 ರನ್ನುಗಳಿಂದ ಇಂಗ್ಲೆಂಡ್‌ಗೆ ತಲೆಬಾಗಿತು. ಅಲ್ಲಿಗೆ ಎರಡೂ ಆತಿಥೇಯ ರಾಷ್ಟ್ರಗಳ ಕತೆ ಮುಗಿಯಿತು. ಭಾರತ ಮಾಜಿ ಆಯಿತು!

ಇಂಗ್ಲೆಂಡ್‌-ಆಸ್ಟ್ರೇಲಿಯ ಫೈನಲ್‌
ಕೋಲ್ಕತಾ ಫೈನಲ್‌ನಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ಎದುರಾದವು. ಇತ್ತಂಡಗಳಿಗೂ ಇದು 2ನೇ ಫೈನಲ್‌ ಆಗಿತ್ತು. ಮೊದಲ ಫೈನಲ್‌ನಲ್ಲಿ ಎರಡೂ ತಂಡಗಳು ಎಡವಿದ್ದವು. ಹೀಗಾಗಿ ಇಲ್ಲಿ ಯಾರೇ ಗೆದ್ದರೂ ಇತಿಹಾಸ ನಿರ್ಮಾಣವಾಗುತ್ತಿತ್ತು. ಈ ಅವಕಾಶ ಎರಡೂ ತಂಡಗಳಿಗಿತ್ತು. ಆದರೆ ಇಂಗ್ಲೆಂಡ್‌ ಇದನ್ನು ಕೈಯಾರೆ ಕಳೆದುಕೊಂಡಿತು. 7 ರನ್ನುಗಳಿಂದ ಗೆದ್ದ ಆಸ್ಟ್ರೇಲಿಯ ಕಿರೀಟ ಏರಿಸಿಕೊಂಡಿತು.

ಅಲನ್‌ ಬೋರ್ಡರ್‌ ನೇತೃತ್ವದ ಆಸ್ಟ್ರೇಲಿಯ ಗಳಿಸಿದ್ದು 5ಕ್ಕೆ 253 ರನ್‌. ಇಂಗ್ಲೆಂಡ್‌ 8ಕ್ಕೆ 246 ರನ್‌ ಗಳಿಸಿ ಗೆಲುವಿನ ಗಡಿಯಲ್ಲಿ ಮುಗ್ಗರಿಸಿತು. ಅನಗತ್ಯ ರಿವರ್ಸ್‌ ಸ್ವೀಪ್‌ಗೆ ಮುಂದಾಗಿ ವಿಕೆಟ್‌ ಕೈಚೆಲ್ಲಿದ ಆಂಗ್ಲರ ನಾಯಕ ಮೈಕ್‌ ಗ್ಯಾಟಿಂಗ್‌ ವಿಲನ್‌ ಎನಿಸಿಕೊಂಡರು. ಇಲ್ಲವಾದರೆ, ಬಹುಶಃ ಇಂಗ್ಲೆಂಡ್‌ ಮೊದಲ ವಿಶ್ವಕಪ್‌ ಎತ್ತಲು 2019ರ ತನಕ ಕಾಯಬೇಕಾದ ಸ್ಥಿತಿ ಎದುರಾಗುತ್ತಿರಲಿಲ್ಲವೋ ಏನೋ!

ಟಾಪ್ ನ್ಯೂಸ್

Udupi ಜಿ. ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ ಡಿ. 5ರಿಂದ ನವೀಕರಣ

Udupi ಜಿ. ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ ಡಿ. 5ರಿಂದ ನವೀಕರಣ

Crime News ಕಾಸರಗೋಡು ಅಪರಾಧ ಸುದ್ಧಿಗಳು

Crime News ಕಾಸರಗೋಡು ಅಪರಾಧ ಸುದ್ಧಿಗಳು

Elephant Attack: ಬೆಳ್ತಂಗಡಿ: ಸಂತ್ರಸ್ತರಿಗೆ ತಲಾ 60 ಸಾ.ರೂ. ಪರಿಹಾರ

Elephant Attack: ಬೆಳ್ತಂಗಡಿ: ಸಂತ್ರಸ್ತರಿಗೆ ತಲಾ 60 ಸಾ.ರೂ. ಪರಿಹಾರ

Udupi; ಪುತ್ತಿಗೆ ಪರ್ಯಾಯ ಡಿ. 6: ಧಾನ್ಯ ಮುಹೂರ್ತ

Udupi; ಪುತ್ತಿಗೆ ಪರ್ಯಾಯ ಡಿ. 6: ಧಾನ್ಯ ಮುಹೂರ್ತ

Rain ಬೆಳ್ತಂಗಡಿಯ ಕೆಲವೆಡೆ ಮಳೆ

Rain ಬೆಳ್ತಂಗಡಿಯ ಕೆಲವೆಡೆ ಮಳೆ

Lok Sabha Elections ಅಭ್ಯರ್ಥಿ ಆಯ್ಕೆ: ಇಂದು ಮಂಗಳೂರಿನಲ್ಲಿ ಮಧು ಬಂಗಾರಪ್ಪ ಸಭೆ

Lok Sabha Elections ಅಭ್ಯರ್ಥಿ ಆಯ್ಕೆ: ಇಂದು ಮಂಗಳೂರಿನಲ್ಲಿ ಮಧು ಬಂಗಾರಪ್ಪ ಸಭೆ

Shettar (3)

BJP; ನನಗೆ ಅವಮಾನಿಸಿದ ಪಕ್ಷಕ್ಕೆ ಮರಳಲಾರೆ: ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sddsadsa

Junior World Cup ಹಾಕಿ: ಜರ್ಮನಿಗೆ ಶರಣಾದ ಭಾರತ

1-wwqewqewqe

Devdutt Padikkal ಸೆಂಚುರಿ ಪವರ್‌: ಚಂಡೀಗಢವನ್ನು ಉರುಳಿಸಿದ ಕರ್ನಾಟಕ

1-sasas

Test: ನ್ಯೂಜಿಲ್ಯಾಂಡ್‌ ಎದುರು ಗೆಲುವಿನತ್ತ ಬಾಂಗ್ಲಾದೇಶ

1-sdsadas

T20 : 4 ನೇ ಪಂದ್ಯದಲ್ಲಿ ಆಸೀಸ್ ಗೆ ಸೋಲುಣಿಸಿ ಸರಣಿ ಗೆದ್ದ ಟೀಮ್ ಇಂಡಿಯಾ

ಪಾಕ್ ಆಯ್ಕೆ ಸಮಿತಿ ಸೇರಿದ ಕಮ್ರಾನ್ ಅಕ್ಮಲ್, ಇಫ್ರಿಕಾರ್ ಮತ್ತು ಸಲ್ಮಾನ್ ಭಟ್

PCB; ಪಾಕ್ ಆಯ್ಕೆ ಸಮಿತಿ ಸೇರಿದ ಕಮ್ರಾನ್ ಅಕ್ಮಲ್, ಇಫ್ರಿಕಾರ್ ಮತ್ತು ಸಲ್ಮಾನ್ ಭಟ್

MUST WATCH

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

udayavani youtube

ಗುರುಕಿರಣ್ ರಿಗೆ ಬೆಂಗಳೂರು ಕಂಬಳದ ಮೇಲಿನ ಆಸಕ್ತಿಯ ಹಿಂದಿದೆ ಅದೊಂದು ಕಾರಣ

ಹೊಸ ಸೇರ್ಪಡೆ

text books

CBSE 10, 12ನೇ ತರಗತಿಗೆ ಇನ್ನು ಗ್ರೇಡ್‌ ಇಲ್ಲ!

MONEY GONI

ಸರಕಾರಕ್ಕೆ ರಾಜಸ್ವ ಕೊರತೆ ಭೀತಿ- ತೆರಿಗೆ ಸಂಗ್ರಹಕ್ಕೆ ಕಠಿನ ಪ್ರಯತ್ನ- ಸಿಎಂ ಸ್ಪಷ್ಟ ಸೂಚನೆ

dialisis

Health: ಡಯಾಲಿಸಿಸ್‌ ಕೇಂದ್ರಗಳೇ ಅಸ್ವಸ್ಥ !

supreme court 1

SC: ಮಸೂದೆಗಳ ಬಗ್ಗೆ ಸಿಎಂ ಜತೆ ಚರ್ಚಿಸಿ- ತ.ನಾಡು ರಾಜ್ಯಪಾಲರಿಗೆ ಸುಪ್ರೀಂ ಕಿವಿಮಾತು

vote

Election: ಡಿ.4ಕ್ಕೆ ಮಿಜೋರಾಂ ಮತ ಎಣಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.