ಚಳಿಗಾಲಕ್ಕೆ ಬಿಸಿ ಬಿಸಿ ತಿಂಡಿ

Team Udayavani, Nov 23, 2019, 4:40 AM IST

ಚಳಿಗಾಲ ಶುರುವಾಗುತ್ತಿದ್ದಂತೆ ಸಂಜೆ ವೇಳೆಗೆ ಬಿಸಿ ಬಿಸಿ ಚಹಾದ ಜತೆ ಸವಿಯಲು ಏನಾದರೂ ಇದ್ದರೆ ಚೆನ್ನಾಗಿತ್ತು ಎನ್ನುವವರು ಮನೆಯಲ್ಲಿ ವಿಧವಿಧವಾದ ತಿಂಡಿಗಳನ್ನು ಮಾಡಿ ತಿನ್ನಬಹುದು ಅದಕ್ಕಾಗಿ ಕೆಲವು ರೆಸಿಫಿಗಳನ್ನು ನೀಡಲಾಗಿದ್ದು ಮನೆಯಲ್ಲಿ ಹಾಯಾಗಿ ಕುಳಿತು ಮಾಡಿ ತಿನ್ನಬಹುದಾಗಿದೆ.

ದಿಢೀರ್‌ ರೈಸ್‌ ಚಕ್ಕುಲಿ
ಬೇಕಾಗುವ ಸಾಮಗ್ರಿ 
ಅನ್ನ- ಒಂದು ಕಪ್‌
ಹುರಿಗಡಲೆ -ಒಂದೂವರೆ ಕಪ್‌
ಜೋಳದ ಹಿಟ್ಟು -ಎರಡು ಚಮಚ
ಖಾರದ ಪುಡಿ -ಒಂದು ಚಮಚ
ಅಜ್ವಾನ -ಅರ್ಧ ಚಮಚ
ಎಳ್ಳು -ಅರ್ಧ ಚಮಚ
ಉಪ್ಪು -ರುಚಿಗೆ ತಕ್ಕಷ್ಟು
ನೀರು ಮತ್ತು ಎಣ್ಣೆ – ಸ್ವಲ್ಪ

ಮಾಡುವ ವಿಧಾನ:
ಮೊದಲಿಗೆ ಹುರಿಗಡಲೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ, ಬಳಿಕ ಅದೇ ಮಿಕ್ಸಿಗೆ ಅನ್ನವನ್ನು ಹಾಕಿ ಗ್ರೈಂಡ್‌ ಮಾಡಿ ಕೊಂಡು ಒಂದು ಮಿಕ್ಸಿಂಗ್‌ ಬೌಲ್‌ಗೆ ಹಾಕಿ ಅದಕ್ಕೆ ಪುಡಿ ಮಾಡಿದ ಹುರಿಗಡಲೆ, ಅಜ್ವಾನ, ಎಳ್ಳು, ಉಪ್ಪು, ಜೋಳದ ಹಿಟ್ಟು, ಖಾರದ ಪುಡಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟನ್ನು ರೆಡಿ ಮಾಡಿಟ್ಟುಕೊಳ್ಳಿ, ಈ ಹಿಟ್ಟನ್ನು ಚಕ್ಕುಲಿ ಮಾಡಿ ಎಣ್ಣೆಯಲ್ಲಿ ಕರಿದರೆ ಗರಿಗರಿಯಾದ ರೈಸ್‌ ಚಕ್ಕುಲಿ ಸವಿಯಲು ಸಿದ್ದ.

ಅವಲಕ್ಕಿ ಪಡ್ಡು
ಬೇಕಾಗುವ ಸಾಮಗ್ರಿಗಳು
ತುರಿದಿರುವ ಕ್ಯಾರೆಟ್‌ – 2
ತುರಿದಿರುವ ಈರುಳ್ಳಿ-1
ಹಸಿ ಮೆಣಸಿನ ಕಾಯಿ -2
ಕರಿ ಬೇವು- ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮೆಣಸಿನ ಪುಡಿ – ಅರ್ಧ ಚಮಚ
ಅರಶಿನ -ಚಿಟಿಕೆ,
ಅಜ್ವಾನ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಬೇಯಿ ಸಿದ ಆಲೂ ಗಡ್ಡೆ -1
ರುಚಿಗೆ ತಕ್ಕ ಷ್ಟು ಉಪ್ಪು

ಮಾಡುವ ವಿಧಾನ:
ಅವಲಕ್ಕಿಯನ್ನು ನೀರಿನಲ್ಲಿ ನೆನೆ ಸಿಟ್ಟು ತೆಗೆದಿಟ್ಟುಕೊಳ್ಳಿ. ಇದಕ್ಕೆ ಬೇಯಿಸಿದ ಆಲೂಗಡ್ಡೆ, ಕ್ಯಾರೇಟ್‌, ಹಸಿರು ಮೆಣಸಿನ ಕಾಯಿ , ಈರುಳ್ಳಿ, ಅರಶಿನ, ಖಾರದ‌ ಪುಡಿ, ಅಜ್ವಾನ ಉಪ್ಪು ಹಾಕಿ ಚೆನ್ನಾಗಿ ಕಲಸಿ ಉಂಡೆ ಮಾಡಿಕೊಂಡು ಪಡ್ಡು ಕಾವಲಿಯಲ್ಲಿಟ್ಟು ಬೇಯಿಸಿದರೆ ರುಚಿಯಾದ ಪಡ್ಡು ಸವಯಲು ಸಿದ್ಧ‌.

ರೈಸ್‌ ಸಮೋಸ
ಬೇಕಾಗುವ ಸಾಮಗ್ರಿ
ಮೈದಾ -1ಚಮಚ
ತುಪ್ಪ – 1/4 ಚಮಚ
ಉಪ್ಪು , 1/4 ಚಮಚ
ಅನ್ನ -2 ಕಪ್‌
ಈರುಳ್ಳಿ – ಅರ್ಧ ಕಪ್‌
ಚಿಲ್ಲಿ ಸಾಸ್‌ – 1 ಚಮಚ
ಎಣ್ಣೆ – ಸ್ವಲ್ಪ

ಮಾಡುವ ವಿಧಾನ:
ಮೊದಲಿಗೆ ಮೈದಾ, ತುಪ್ಪ, ಉಪ್ಪು ಹಾಕಿ ಹಿಟ್ಟು ತಯಾರಿಸಿಕೊಳ್ಳಿ. ಬಳಿಕ ಒಂದು ಪ್ಯಾನ್‌ಗೆ ತುಪ್ಪ ಹಾಕಿ ಬಿಸಿಯಾದ ಬಳಿಕ ಈರುಳ್ಳಿ, ಬೇಯಿಸಿದ ಅನ್ನ, ಸ್ವಲ್ಪ ಸಾಸ್‌, ಉಪ್ಪು ಹಾಕಿ ಮಿಶ್ರ ಣ ಮಾಡಿಕೊಳ್ಳಿ, ತಯಾರಿಸಿದ ಹಿಟ್ಟನ್ನು ಲಟ್ಟಿಸಿ ಅದಕ್ಕೆ ಅನ್ನದ ಮಿಶ್ರಣವನ್ನು ಹಾಕಿ ಸಮೋಸ ಆಕೃತಿ ಮಾಡಿ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ರೈಸ್‌ ಸಮೋಸ ಸವಿಯಲು ಸಿದ್ಧ.

ಉದ್ದಿನ ಬೇಳೆ ಪೂರಿ
ಸಾಮಗ್ರಿ:
ಮೈದಾ -1 ಕಪ್‌
ರವಾ – ಕಾಲು ಕಪ್‌
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಸ್ವಲ್ಪ
ಮಸಾಲ ಪೌಡರ್‌:
ಜೀರಿಗೆ – 1 ಚಮಚ
ಕೊತ್ತಂಬರಿ –
ಚಮಚ
ಕರಿಮೆಣಸು -8
ಕೆಂಪು ಮೆಣಸು – 5
ಸ್ಟಫಿಂಗ್‌:
4 ಗಂಟೆ ನೆನೆಸಿಟ್ಟುಕೊಂಡ ಉದ್ದಿನ ಬೇಳೆ- ಕಾಲು ಕಪ್‌
ಎಣ್ಣೆ -2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:
ಮೊದಲಿಗೆ ಹಿಟ್ಟು ತಯಾರಿಸಿಟ್ಟುಕೊಳ್ಳಿ, ಬಳಿಕ ಒಂದು ಪ್ಯಾನ್‌ ಬಿಸಿಮಾಡಿ ಅದಕ್ಕೆ ಜೀರಿಗೆ, ಕೊತ್ತಂಬರಿ, ಕರಿಮೆಣಸು, ಕೆಂಪು ಮೆಣಸು ಹಾಕಿ ಚೆನ್ನಾಗಿ ಹುರಿದು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ, ಅನಂತರ ಉದ್ದಿನ ಬೇಳೆಯನ್ನು ತೊಳೆದು 4 ಗಂಟೆ ನೆನೆಸಿಟ್ಟುಕೊಳ್ಳಿ, ಬಳಿಕ ಅದಕ್ಕೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ, ಒಂದು ಪ್ಯಾನ್‌ಗೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ ಬಳಿಕ ತಯಾರಿಸಿಟ್ಟ ಮಸಾಲ ಪೌಡರ್‌ ಹಾಕಿ ಮೂರು ನಿಮಿಷಗಳ ಕಾಲ ಬೇಯಿಸಿ. ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿ ತೆಗೆದಿಟ್ಟುಕೊಳ್ಳಿ. ಕೊನೆಗೆ ಹಿಟ್ಟನ್ನು ಪೂರಿ ಹದಕ್ಕೆ ಲಟ್ಟಿಸಿ ಮಾಡಿದ ಮಿಶ್ರಣವನ್ನು ಅದರಲ್ಲಿಟ್ಟು ಮತ್ತೆ ಲಟ್ಟಿಸಿ ಎಣ್ಣೆಯಲ್ಲಿ ಕರಿದರೆ ಉದ್ದಿನ ಬೇಳೆ ಪೂರಿ ಸವಿಯಲು ಸಿದ್ದ.

ಕ್ಯಾಬೇಜ್‌ ಪಕೋಡಾ
ಬೇಕಾಗುವ ಸಾಮಗ್ರಿ
ಕ್ಯಾಬೇಜ್‌ -2 ಕಪ್‌
ಕಡ್ಲೆ ಹಿಟ್ಟು – ಒಂದು ಕಪ್‌
ಅಕ್ಕಿ ಹಿಟ್ಟು- 3 ಚಮ ಚ
ಜೀರಿಗೆ – ಒಂದು ಚಮ ಚ
ಅಜ್ವಾನ -ಕಾಲು ಚಮ ಚ
ಖಾರದ ಪುಡಿ-  ಒಂದು ಚಮಚ
ಈರುಳ್ಳಿ – 1
ಹಸಿ ಮೆಣಸಿನ ಕಾಯಿ -1
ಕೊತ್ತಂಬರಿ ಸೊಪ್ಪು -ಸ್ವಲ್ಪ
ಎಣ್ಣೆ -ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ನೀರು -ಸ್ವಲ್ಪ

ಮಾಡುವ ವಿಧಾನ
ಮೇಲಿನ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸ್‌ ಮಾಡಿ ಹಿಟ್ಟು ರೆಡಿ ಮಾಡಿ ಕೊಂಡು ಪಕೋಡಾ ಹದಕ್ಕೆ ಮಾಡಿ ಎಣ್ಣೆಯಲ್ಲಿ ಕರಿದರೆ ಪಕೋಡಾ ಸವಿಯಲು ಸಿದ್ಧ.

ಹೀರೆಕಾಯಿ ಬೋಂಡ
ಬೇಕಾಗುವ ಸಾಮಗ್ರಿಗಳು:
ಕಡ್ಲೆಹಿಟ್ಟು- ಮುಕ್ಕಾಲು ಕಪ್‌,
ಅಕ್ಕಿ ಹಿಟ್ಟು- ಅರ್ಧ ಕಪ್‌,
ಉಪ್ಪು ಮತ್ತು ಖಾರ ಪುಡಿ
ಗರಂ ಮಸಾಲ ಪುಡಿ – ಸ್ವಲ್ಪ
ಅಡುಗೆ ಸೋಡಾ-1 ಚಿಟಿಕೆ,
ಹೀರೆಕಾಯಿ-1,
ಎಣ್ಣೆ -ಸ್ವಲ್ಪ

ಮಾಡುವವಿಧಾನ:
ಕಡ್ಲೆಹಿಟ್ಟಿಗೆ ಅಕ್ಕಿ ಹಿಟ್ಟು, ಉಪ್ಪು, ಖಾರ ಪುಡಿ, ಜೀರಿಗೆ ಪುಡಿ, ಬಿಸಿ ಎಣ್ಣೆ ಮತ್ತು ಅಡುಗೆ ಸೋಡಾ ಹಾಕಿ ನೀರು ಸೇರಿಸಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಡಿ. ಹೀರೆಕಾಯಿಯನ್ನು ತೊಳೆದು ಮಧ್ಯಮ ಗಾತ್ರದಲ್ಲಿ ಕತ್ತರಿಸಿ ಕಲಸಿಟ್ಟ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿಕರಿಯಿರಿ.

ಹೀರೆಕಾಯಿ ಸಿಹಿ ಹುಳಿ
ಬೇಕಾಗುವ ಸಾಮಗ್ರಿ
l ಹೀರೆಕಾಯಿ ಹೋಳು-2 ಕಪ್‌
l ಹೆಸರುಬೇಳೆ- ಸ್ಪಲ್ಪ
l ಗಸಗಸೆ-1 ಚಮಚ,
l ತೆಂಗಿನ ತುರಿ-ಸ್ಪಲ್ಪ
l ಬೆಲ್ಲ-1 ಚಮಚ
l ಹಾಲು-1 ಕಪ್‌

ಮಾಡುವ ವಿಧಾನ
ಒಂದು ಹಿಡಿ ಹೀರೆಕಾಯಿ ಮತ್ತು ಹೆಸರು ಬೇಳೆಗೆ ಗಸಗಸೆ, ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿಡಿ. ನೀರು ಕುದಿಸಲು ಇಡಿ ಅದಕ್ಕೆ ಹೆಸರು ಬೇಳೆ, ಸ್ವಲ್ಪ ಅರಿಶಿನ ಹಾಕಿ ಬೇಯಿಸಿ. ಹೆಸರುಬೇಳೆ ಅರ್ಧ ಬೆಂದ ಮೇಲೆ ಉಳಿದ ಹೀರೆಕಾಯಿ ಹೋಳುಗಳನ್ನು ಹಾಕಿ ಬೇಯಿಸಿ ಉಪ್ಪು, ಬೆಲ್ಲ, ಕರಿಬೇವು ಮತ್ತು ರುಬ್ಬಿದ ಮಸಾಲೆ ಸೇರಿಸಿ ತಳ ಸೀಯದಂತೆ ಕುದಿಸಿ ಒಗ್ಗರಣೆ ಬೆರೆಸಿ ಹಾಲು ಹಾಕಿ ಮುಚ್ಚಿಡಿ.

-   ವಿಶು ಅಮೀನ್‌


ಈ ವಿಭಾಗದಿಂದ ಇನ್ನಷ್ಟು

  • ಬೇಕಾಗುವ ಸಾಮಗ್ರಿಗಳು ಎಣ್ಣೆ -ಸ್ವಲ್ಪ 3 ಕಪ್‌ ದಪ್ಪ ಅವಲಕ್ಕಿ ಶೇಂಗಾ ಬೀಜ-ಅರ್ಧ ಕಪ್‌ ಬಾದಾಮಿ ಬೀಜ-ಕಾಲು ಕಪ್‌ ಗೋಡಂಬಿ-ಕಾಲು ಕಪ್‌ ಕಡಲೆ ಬೇಳೆ-2 ದೊಡ್ಡ ಚಮಚ ಕರಿಬೇವಿನ...

  • 1 ಪಾತ್ರೆ ನೀರು ಎಣ್ಣೆ-ಅಗತ್ಯವಿದ್ದಷ್ಟು ಹಕ್ಕ ನೂಡಲ್ಸ್‌-1 ಪ್ಯಾಕ್‌ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ-1 ಚಮಚ ಈರುಳ್ಳಿಯ ಬಿಳಿಭಾಗ-2 ಚಮಚ ಕ್ಯಾಬೇಜ್‌-1 ಕಪ್‌ ಸಣ್ಣಗೆ...

  • ಬೇಕಾಗುವ ಸಾಮಗ್ರಿಗಳು ಖೋಯಾ- 100 ಗ್ರಾಂ ಬಾದಾಮ್‌- 60 ಗ್ರಾಂ ಪಿಸ್ತಾ -6ಂ ಗ್ರಾಂ ಸಕ್ಕರೆ - 60 ಗ್ರಾಂ ಏಲಕ್ಕಿ - 3 ತುಪ್ಪ ಬಾದಾಮ್‌ ಪೌಡರ್‌ - 2 ಚಮಚ ಮಾಡುವ ವಿಧಾನ: ಒಂದು...

  • ಬೇಕಾಗುವ ಸಾಮಗ್ರಿ ಅಕ್ಕಿಹಿಟ್ಟು: 1 ಕಪ್‌ ಉಪ್ಪು: ಸ್ವಲ್ಪ ತೆಂಗಿನ ತುರಿ: 1 ಕಪ್‌ ಕಡಲೆ ಪದಾರ್ಥಕ್ಕೆ: ನೆನೆಸಿಟ್ಟ ಕಡಲೆ: 1 ಕಪ್‌ ಎಣ್ಣೆ: ಸ್ವಲ್ಪ ಏಲಕ್ಕಿ, ಜೀರಿಗೆ:...

  • ಇಂದಿನ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಪೂರಕವಾಗಿರುವಂತಹ ಯಾವುದೇ ಗುಣಗಳಿರುವುದಿಲ್ಲ, ಫಾಸ್ಟ್‌ಫ‌ುಡ್‌ಗಳಲ್ಲಿ ಒಳಿತಿಗಿಂತ ಕೆಡುಕೇ ಅಧಿಕವಾಗಿರುತ್ತದೆ....

ಹೊಸ ಸೇರ್ಪಡೆ