ರುಚಿಯಾದ ಆಹಾರ: ಫ‌ಲಾಪೆಲ್‌

Team Udayavani, Dec 7, 2019, 4:50 AM IST

ರುಚಿಯಾದ ಆಹಾರಗಳು ಹೆಚ್ಚಿನವು ದೇಹದ ಆರೋಗ್ಯವನ್ನು ಕೆಡಿಸುತ್ತವೆ ಎಂಬ ಅಭಿಪ್ರಾಯವಿದೆ. ಆದರೆ ನಾಲಿಗೆಗೆ ರುಚಿ ದೊರಕಿಸುವುದರೊಂದಿಗೆ ದೇಹದ ಆರೋಗ್ಯವನ್ನು ಸಮತಲದಲ್ಲಿರಿಸಲು ಫ‌ಲಾಪೆಲ್‌ ಸೂಕ್ತ ರೆಸಿಪಿ ಎನ್ನಬಹುದು. ಇದರಲ್ಲಿರುವ ಕಡಿಮೆ ಕೊಬ್ಬಿನಾಂಶ ಹೊಸ ರುಚಿಯನ್ನು ಪರಿಚಯಿಸುವುದರೊಂದಿಗೆ ಅಧಿಕ ಪೌಷ್ಟಿಕಾಂಶವನ್ನು ದೇಹಕ್ಕೆ ಒದಗಿಸುತ್ತದೆ.

ಫ‌ಲಾಪೆಲ್‌ ಇದು ಮಧ್ಯಪ್ರಾಚೀನ ಯುಗದ ಜನರ ನೆಚ್ಚಿನ ತಿನಿಸಾಗಿದ್ದು ಇಸ್ರೇಲ್‌ನ ರಾಷ್ಟ್ರೀಯ ಖಾದ್ಯ ಎಂಬ ಹೆಗ್ಗಳಿಕೆ ಇದಕ್ಕಿದೆ. ಉಪವಾಸದ ಅವಧಿಯಲ್ಲಿ ಶಾಕಾಹಾರ ಸೇವಿಸಲು ಇಷ್ಟಪಡದವರಿಗೆ ಈ ತಿನಿಸು ಬಲು ಇಷ್ಟವಂತೆ. ಇದನ್ನು ತಯಾರಿಸುವಾಗ ವಿವಿಧ ಪೋಷಕಾಂಶವುಳ್ಳ ಆಹಾರವನ್ನು ಸೇರ್ಪಡಿಸುವುದರಿಂದ ಸೇವನೆಯು ಬಹಳ ಉಪಯುಕ್ತವಾಗಿದೆ.

ಬೇಕಾಗುವ ಸಾಮಗ್ರಿ
ಚನ್ನಾ ಕಡಲೆ (8ಗಂಟೆ ನೆನೆಹಾಕಿರಬೇಕು)- 1 ಕಪ್‌
ಜೀರಿಗೆ ಪುಡಿ- 1 ಚಮಚ
ಕಾಳು ಮೆಣಸಿನ ಪುಡಿ -1 ಚಮಚ
ಕೊತ್ತ¤ಂಬರಿಸೊಪ್ಪು-ಸ್ವಲ್ಪ
ಚಿಕ್ಕದಾಗಿ ಹೆಚ್ಚಿದ ಈರುಳ್ಳಿ – 1-2
ಬೆಳ್ಳುಳ್ಳಿ- 7 ಎಸಲು
ಹಸಿಮೆಣಸು -2
ಕಡ್ಲೆ ಹಿಟ್ಟು- ಅರ್ಧ ಕಪ್‌
ಖಾರದ ಪುಡಿ – 1 ಚಮಚ
ಆಲಿವ್‌ ಎಣ್ಣೆ -ಸ್ವಲ್ಪ
ಉಪ್ಪು -ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಒಂದು ಕಪ್‌ ನೆನೆಹಾಕಿದ ಚನ್ನಾಕಡಲೆ, ಹೆಚ್ಚಿದ ಈರುಳ್ಳಿ, ಕೊತ್ತುಂಬರಿ ಸೊಪ್ಪು, ಬೆಳ್ಳುಳ್ಳಿ- ಹಸಿಮೆಣಸು, ಖಾರದ ಪುಡಿ, ಜೀರಿಗೆ, ಕರಿಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸಿಯಲ್ಲಿ ಡ್ರೈ ಪೇಸ್ಟ್‌ ಮಾಡಬೇಕು. ಬಳಿಕ ಅದೇ ಪೇಸ್ಟ್‌ಗೆ ಕಡಲೆ ಹಿಟ್ಟನ್ನು ಹಾಕಿ ಪುನಃ ಮಿಕ್ಸಿಯಲ್ಲಿ ಡ್ರೈ ಪೇಸ್ಟ್‌ ಮಾಡಿಟ್ಟು ಕೊಳ್ಳಿ (ನೀರನ್ನು ಹೆಚ್ಚಾಗಿ ಬೆರೆಸಬಾರದು). ಡ್ರೈ ಪೇಸ್ಟ್‌ ಹಿಟ್ಟು ಮೃದುವಾಗಿದ್ದರೆ ಅದಕ್ಕೆ ಕಡಲೆ ಹಿಟ್ಟನ್ನು ಬೆರೆಸಿ ಉಂಡೆ ಆಕಾರಗೊಳಿಸಿ. ಬಳಿಕ ಓವನ್‌ನಲ್ಲಿ 15 ನಿಮಿಷ ಬೇಯಿಸಿ. ಹೊರತೆಗೆದು ಆಲಿವ್‌ ಎಣ್ಣೆ ಪಾಲಿಶ್‌ ಮಾಡಿ ಪುನಃ ಹತ್ತು ನಿಮಿಷ ಬೇಯಿಸಬೇಕು. ಚಟ್ನಿ, ಸಾಸ್‌ ಜತೆ ರುಚಿ ರುಚಿಯಾದ ಫ‌ಲಾಪೆಲ್‌ ಸವಿಯಲು ಸಿದ್ಧವಾಗುತ್ತದೆ.

-  ರಾಧಿಕಾ ಕುಂದಾಪುರ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಹೋಳಿಗೆಯನ್ನು ನಾವು ಎಲ್ಲ ಕಾರ್ಯಕ್ರಮಗಳಲ್ಲೂ ಬಳಸುತ್ತೇವೆ. ಇದೊಂದು ಹೆಚ್ಚಾಗಿ ಸಿಹಿಯಾದ ಖಾದ್ಯವಾಗಿದ್ದು, ಕೆಲವೊಮ್ಮೆ ಖಾರದ ಹೋಳಿಗೆಯನ್ನೂ ತಯಾರಿಸಲಾಗುತ್ತದೆ....

  • ಧೋಕ್ಲಾ ಗುಜರಾತಿ ಪಾಕಪದ್ಧತಿಯ ವಿಶೇಷತೆಗಳಲ್ಲಿ ಇದು ಒಂದಾಗಿದೆ. ಗುಜರಾತಿ ಪಾಕಪದ್ಧತಿಯಲ್ಲಿ ಸಾಕಷ್ಟು ರುಚಿಯಾದ ಮತ್ತು ಉತ್ತಮ ವಾದ ತಿಂಡಿಗಲ್ಲಿ ಧೋಕ್ಲಾ ಅಗ್ರಸ್ಥಾನ...

  • ಖಾರ ಹೋಳಿಗೆ ಬೇಕಾಗುವ ಸಾಮಗ್ರಿಗಳು ತೊಗರಿಬೇಳೆ- 2 ಕಪ್‌ ಕಡಳೆಬೇಳೆ- 1 ಕಪ್‌ ಹಸಿಮೆಣಸಿನಕಾಯಿ- 5 ಜೀರಿಗೆ - 1 ಚಮಚ ತೆಂಗಿನ ತುರಿ- 1 ಕಪ್‌ ಅರಶಿನ- ಒಂದು ಚಿಟಿಕೆ ಶುಂಠಿ-...

  • ಮಕರ ಸಂಕ್ರಾಂತಿಯು ಹಿಂದೂಗಳ ವಿಶೇಷ ದಿನವಾಗಿದ್ದು, ಈ ದಿನ ಎಲ್ಲ ಊರುಗಳಲ್ಲೂ ವಿಶೇಷ ತಿಂಡಿಗಳನ್ನು ಮಾಡುತ್ತಾರೆ. ದೇವರ ಪ್ರಸಾದವಾಗಿ ಅಥವಾ ಹಬ್ಬದ ಸಂಭ್ರಮಕ್ಕಾಗಿ...

  • ಉಡುಪಿ ಶ್ರೀಕೃಷ್ಣಮಠದಲ್ಲಿ ಮಕರಸಂಕ್ರಾಂತಿ ಮರುದಿನ ಚೂರ್ಣೋತ್ಸವಕ್ಕೆ ಕೆಲವೊಂದು ಭಕ್ಷ್ಯಗಳು ವಿಶೇಷ. ಭೋಜನದ ವೇಳೆ ಅಶ್ವತ್ಥಾಮಾಚಾರ್ಯರು ಬರುತ್ತಾರೆಂಬ...

ಹೊಸ ಸೇರ್ಪಡೆ