ಯುವ ಕಲಾವಿದೆಯರ ನೃತ್ಯಾಂತರಂಗ


Team Udayavani, Jul 28, 2017, 8:03 AM IST

28-KALA-3.jpg

ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ ಆಯೋಜಿಸುವ ಸರಣಿ ನೃತ್ಯ ಕಾರ್ಯಕ್ರಮ ನೃತ್ಯಾಂತರಂಗ ನೃತ್ಯ ಸರಣಿಯ 30ನೇ ಕಾರ್ಯಕ್ರಮವು ಇತ್ತೀಚೆಗೆ ಪುತ್ತೂರು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಅಕಾಡೆಮಿಯ ಪುಟಾಣಿ ಕಲಾವಿದರಿಂದ ನೆರವೇರಿತು. ಕಾರ್ಯಕ್ರಮದ ಅಭ್ಯಾಗತರಾಗಿ ಉಪನ್ಯಾಸಕರು ಹಾಗೂ ಸಂಗೀತ-ನೃತ್ಯ ಕಲಾವಿದರಾದ ಡಾ| ಶೋಭಿತಾ ಸತೀಶ್‌ ಅವರು ದೀಪ ಬೆಳಗಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ಜೀವನದಲ್ಲಿ ಲಲಿತಕಲೆಗಳ ಮಹತ್ವ, ವ್ಯಕ್ತಿತ್ವ ವಿಕಸನದಲ್ಲಿ ಅವುಗಳ ಪಾತ್ರದ ಬಗ್ಗೆ ವಿವರಿಸಿ ಪುಟಾಣಿ ಕಲಾವಿದರಿಗೆ ಶುಭ ಕೋರಿದರು. ವಿದ್ಯಾರ್ಥಿಗಳಾದ ಕು| ಇಶಾ ಸುಲೋಚನಾ ಮುಳಿಯ, ಶ್ರೇಯಾ ಕಲ್ಲೂರಾಯ, ಪ್ರಾರ್ಥನಾ ಬಿ., ವಿಂಧ್ಯಾ ಕಾರಂತ, ಶಮಾ ಚಂದಕೂಡ್ಲು ಮತ್ತು ಅಕ್ಷಯಪಾರ್ವತಿ ಸರೋಳಿ ಗುರುಪೂರ್ಣಿಮೆಯ ಶುಭಸಂದರ್ಭದಲ್ಲಿ  ನೃತ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶುದ್ಧಧನ್ಯಾಸಿ ರಾಗ, ಆದಿತಾಳದ ಗಣೇಶ ಸ್ತುತಿಯನ್ನು ವಿದ್ಯಾರ್ಥಿನಿಯರು ಉತ್ತಮವಾಗಿ ಪ್ರಸ್ತುತ ಪಡಿಸಿ ವಿಘ್ನ ನಿವಾರಕನಿಗೆ ವಂದನೆ ಸಲ್ಲಿಸಿದರು. ಅನಂತರ ಪ್ರತಿಯೊಂದು ನೃತ್ಯವನ್ನು ಒಬ್ಬೊಬ್ಬರಾಗಿಯೇ ನರ್ತಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. 

ಕು| ಶಮಾ ಚಂದಕೂಡ್ಲು$ಇವರು ಶ್ರೀರಂಜನಿ ರಾಗ ಆದಿತಾಳದ ಗಜವದನಾ ಕರುಣಸದನ ಸ್ತುತಿಯನ್ನು ಸರಳ ಸುಂದರವಾಗಿ ನರ್ತಿಸಿದರು. ಬಳಿಕ ಕು| ಇಶಾ ಸುಲೋಚನಾ ಮುಳಿಯ ಅವರು ಹಿಂದೋಳ ರಾಗ ಆದಿ ತಾಳದಲ್ಲಿರುವ ಮಾಮವತು ಎಂಬ ಸರಸ್ವತಿ ಸ್ತುತಿಯನ್ನು ಭಾವಪೂರ್ಣವಾಗಿ ನರ್ತಿಸಿದರು.  

ತದನಂತರ ಮಹಾವೈದ್ಯನಾಥ ಅವರ ರಚನೆಯಾದ, ಜನರಂಜಿನಿ ರಾಗ, ಆದಿ ತಾಳದಲ್ಲಿರುವ ಪಾಹಿಮಾಂ ಶ್ರೀ ರಾಜರಾಜೇಶ್ವರಿ ಎಂಬ ಕೃತಿಗೆ ನೃತ್ಯ ಪ್ರಸ್ತುತಿಯನ್ನು ಕು| ಶ್ರೇಯಾ ಕಲ್ಲೂರಾಯ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇನ್ನೋರ್ವ ಕಲಾವಿದೆಯಾದ ವಿಂಧ್ಯಾ ಕಾರಂತ ಇವರು ಸ್ವಾತಿ ತಿರುನಾಳ್‌ ಮಹಾರಾಜರ ಆರಾಧ್ಯದೇವರಾದ ತಿರುವನಂತಪುರದ ಅನಂತಪದ್ಮನಾಭನ ಕುರಿತಾದ ಪರಮಪುರುಷ ಜಗದೀಶ್ವರ ಎಂಬ ಕೀರ್ತನೆಗೆ ಹೆಜ್ಜೆ ಹಾಕಿದರು. ಸರಳವಾದ ಜತಿ ಹಾಗೂ ಕೊನೆಯಲ್ಲಿ ಮೂಡಿಬಂದ ಅನಂತಪದ್ಮನಾಭನ ದರ್ಶನದ ಅನುಭವವನ್ನು ತಮ್ಮ ಅಭಿನಯದ ಮೂಲಕ ಸೊಗಸಾಗಿ ನಿರ್ವಹಿಸಿದರು. ಮುಂದೆ ಕು| ಪ್ರಾರ್ಥನಾ ಬಿ. ಇವರು ನಾಗಸ್ವರಾವಳಿ ರಾಗ, ಆದಿತಾಳದ ಶಿವನ ತಾಂಡವಗಳಲ್ಲಿ ಒಂದಾದ ಆನಂದ ತಾಂಡವದ ವರ್ಣನೆಯುಳ್ಳ ಕನ್ನಡ ರಚನೆ ಆನಂದ ತಾಂಡವೇಶ್ವರನಾ ಕೃತಿಗೆ     ಮನೋಹರವಾಗಿ ನರ್ತಿಸಿದರು. ಮತ್ತೋರ್ವ ನ್ಯತ್ಯಗಾತಿ ಕು| ಅಕ್ಷಯಪಾರ್ವತಿ ಸರೋಳಿ ಅವರು ಮೈಸೂರು ವಾಸುದೇವಾಚಾರ್ಯರ ಕಮಾಚ್‌ ರಾಗ, ಆದಿತಾಳದ ಬ್ರೋಚೇವಾರೆವರುರಾ ಕೃತಿಯನ್ನು ಅತ್ಯುತ್ತಮವಾಗಿ, ಬಹಳ ಪ್ರಬುದ್ಧವಾಗಿ ನರ್ತಿಸಿದರು. ಕಾರ್ಯಕ್ರಮದ ಅಂತ್ಯ ಭಾಗದಲ್ಲಿ ಎಲ್ಲ ಕಲಾವಿದೆಯರು ಒಟ್ಟಾಗಿ ನಾಸಿಕಭೂಷಿಣಿ ರಾಗದ ಮುತ್ತುಸ್ವಾಮಿ ದೀಕ್ಷಿತರ ಕೃತಿ ಶ್ರೀ ರಮಾ ಸರಸ್ವತೀ ನೃತ್ಯಕ್ಕೆ ದೀಪಕ್‌ ಕುಮಾರ್‌ ಅವರು ಮಾಡಿದ ಬಹಳ ಸುಂದರವಾದ ಸಂಯೋಜನೆಯಲ್ಲಿ ನಿಖರವಾಗಿ ಹಜ್ಜೆ ಹಾಕಿದರು. ಹಿಮ್ಮೇಳನದ ನಟುವಾಂಗದಲ್ಲಿ ನೃತ್ಯ ಗುರುಗಳಾದ ವಿ| ದೀಪಕ್‌ ಕುಮಾರ್‌, ಹಾಡುಗಾರಿಕೆಯಲ್ಲಿ ವಿ| ಪ್ರೀತಿಕಲಾ ಹಾಗೂ ಮೃದಂಗದಲ್ಲಿ ವಿ| ಶ್ರೀಧರ ರೈ ಕಾಸರಗೋಡು ಸಹಕರಿಸಿದರು.

ಈ ಎಲ್ಲ ಬಾಲ ಕಲಾವಿದೆಯರು ಕಳೆದ ಐದಾರು ವರ್ಷಗಳಿಂದ ನೃತ್ಯಾಭ್ಯಾಸ ನಡೆಸುತ್ತಿದ್ದು, ಹಲವಾರು ಕಡೆಗಳಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ನೃತ್ಯಗಾರ್ತಿಯರ ಅಭಿನಯ, ಅಂಗಶುದ್ಧಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮುಖ್ಯವಾಗಿ ಈ ಒಂದು ಕಾರ್ಯಕ್ರಮಕ್ಕೆ ಎಲ್ಲ ಜನ ಪುಟಾಣಿ ಉದಯೋನ್ಮುಖ ಕಲಾವಿದರು ನಡೆಸಿದ ಚೊಕ್ಕವಾದ ತಯಾರಿ, ನೃತ್ಯ ಪ್ರಸ್ತುತಿಯಲ್ಲಿ ಹೊಂದಾಣಿಕೆ, ಗುರುಗಳ ಶ್ರಮ ಮತ್ತು ಸೃಜನಶೀಲ ಸಂಯೋಜನೆ, ಹೆತ್ತವರ ಶ್ರಮ ಇವೆಲ್ಲವೂ ಎದ್ದು ಕಾಣುತ್ತಿತ್ತು. ಕಾರ್ಯಕ್ರಮ ಪುಟ್ಟದಾದರೂ ಎಲ್ಲ ಪ್ರೇಕ್ಷಕರಿಗೆ ಮೆಚ್ಚುಗೆಯಾದದ್ದು ಇದೇ ಕಾರಣಕ್ಕೆ.  

ಕಲಾಶಾಲೆಯ ವಿದ್ಯಾರ್ಥಿಗಳಿಗಾಗಿ ಪ್ರಾರಂಭವಾಗಿದ್ದ ನೃತ್ಯಾಂತರಂಗ ಇಂದು ರಾಜ್ಯದ, ಹೊರ ರಾಜ್ಯದ ಉದಯೋನ್ಮುಖ ಕಲಾವಿದರಿಗೂ ವೇದಿಕೆ ಕಲ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಹೆಮ್ಮೆಯ ವಿಷಯವೇ ಸರಿ. ಈ ಎಲ್ಲ ಯಶಸ್ಸಿನ ಹಿಂದಿನ ಶಕ್ತಿ ಗುರು ವಿ| ದೀಪಕ್‌ ಕುಮಾರ್‌ ಹಾಗೂ ಮನೆಯವರು ಎಂದರೆ ತಪ್ಪಾಗಲಾರದು. 

ಅಪೂರ್ವಾ

ಟಾಪ್ ನ್ಯೂಸ್

“ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ..” ಕಿವೀಸ್ ಗ್ರೇಟ್ ಎಸ್ಕೇಪ್ ಗೆ ನೆಟ್ಟಿಗರ ಪ್ರತಿಕ್ರಿಯೆ

“ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ..” ಕಿವೀಸ್ ಗ್ರೇಟ್ ಎಸ್ಕೇಪ್ ಗೆ ನೆಟ್ಟಿಗರ ಪ್ರತಿಕ್ರಿಯೆ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 153 ಅಂಕ ಏರಿಕೆ; 17 ಸಾವಿರ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 153 ಅಂಕ ಏರಿಕೆ; 17 ಸಾವಿರ ಗಡಿ ದಾಟಿದ ನಿಫ್ಟಿ

1-nirani

ಮುಖ್ಯಮಂತ್ರಿಯಾಗುತ್ತಾರೆ: ಈಶ್ವರಪ್ಪ ಹೇಳಿಕೆಗೆ ನಾನು ಋಣಿ ಎಂದ ನಿರಾಣಿ

yaddi

‘ತಮಾಷೆಗಾಗಿ ಹೇಳಿದ್ದು’ ಎಂದು ಈಶ್ವರಪ್ಪ ಹೇಳಿದ್ದಾರಲ್ಲ : ಯಡಿಯೂರಪ್ಪ ಸ್ಪಷ್ಟನೆ

1-sdsd

ಸಂಕಷ್ಟದ ಸಂದರ್ಭ ಬೊಮ್ಮಾಯಿ ಬದಲಾವಣೆ ಅಸಾಧ್ಯ: ಕಾರಜೋಳ

ರಾಜ್ಯಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ ಗದ್ದಲ, ಕೋಲಾಹಲ; 12 ಮಂದಿ ಸಂಸದರ ಅಮಾನತು

ರಾಜ್ಯಸಭೆಯಲ್ಲಿ ಕಾಂಗ್ರೆಸ್, ಸಿಪಿಎಂ ಗದ್ದಲ, ಕೋಲಾಹಲ; 12 ಮಂದಿ ಸಂಸದರ ಅಮಾನತುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

udayavani youtube

Suratkal : ಮತ್ತೆ ATM ಕೇಂದ್ರ ಪುಡಿ ಪುಡಿ! 2ತಿಂಗಳ ಅಂತರದಲ್ಲಿ ನಡೆದ 2ನೇ ಘಟನೆ

udayavani youtube

ದಾಂಡೇಲಿ : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು, ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

ಹೊಸ ಸೇರ್ಪಡೆ

ಅಕ್ರಮ ಪಡಿತರ ಅಕ್ಕಿ- ಕ್ಯಾಂಟರ್‌ ವಶ

ಅಕ್ರಮ ಪಡಿತರ ಅಕ್ಕಿ: ಕ್ಯಾಂಟರ್‌ ವಶ

“ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ..” ಕಿವೀಸ್ ಗ್ರೇಟ್ ಎಸ್ಕೇಪ್ ಗೆ ನೆಟ್ಟಿಗರ ಪ್ರತಿಕ್ರಿಯೆ

“ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ..” ಕಿವೀಸ್ ಗ್ರೇಟ್ ಎಸ್ಕೇಪ್ ಗೆ ನೆಟ್ಟಿಗರ ಪ್ರತಿಕ್ರಿಯೆ

21election

ಸುವ್ಯವಸ್ಥಿತ ಚುನಾವಣೆಗೆ ಸ್ಪರ್ಧಿಗಳ ಸಹಕಾರ ಅಗತ್ಯ

20indresh

ಶಹಾಪುರಕ್ಕೆ ನ್ಯಾಯಮೂರ್ತಿ ಇಂದ್ರೀಶ್‌ ಭೇಟಿ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.