Udayavni Special

ಮನದೊಳಗೆ ಬರೆದಿರುವ ಹೆಸರು ನಿನ್ನದೇ…


Team Udayavani, Oct 1, 2019, 5:00 AM IST

a-12

ನನ್ನೊಲವೇ,
ನನ್ನ ನಿನ್ನ ಪರಿಚಯಕ್ಕೆ ಇಂದಿಗೆ ಬರೋಬ್ಬರಿ ಮೂರು ವರ್ಷ, ಮೂರು ತಿಂಗಳು ತುಂಬಿದವು. ಅಂದು ಕಾಲೇಜಿಗೆ ನನ್ನ ಮೊದಲ ಆಗಮನ. ನಿನ್ನದು ಗೊತ್ತಿಲ್ಲ. ತಡಮಾಡಿ ಅವಸವಸರವಾಗಿ ಹಳೆಯ ಹಾಡಿನ ಮಾಧುರ್ಯದಂತೆ ನಡೆದು ಬಂದು ನನ್ನಿಂದ ಅನತಿ ದೂರದ ಬೆಂಚ್‌ ಮೇಲೆ ಕುಳಿತು ನಿಟ್ಟುಸಿರುಬಿಟ್ಟೆ.

ಆ ದಿನ ಇನ್ನೂ ನೆನಪಿದೆ. ಅಕಸ್ಮಾತಾಗಿ ಒಬ್ಬರಿಗೊಬ್ಬರು ನೋಡಿ ನಕ್ಕಾಗಿನಿಂದ, ಎದೆಯ ಗೋಡೆಯ ಮೇಲೆ ಹೃದಯ ಪ್ರೇಮ ಲಹರಿ ಗೀಚಲು ಆರಂಭವಾಯಿತು. ಮನಸ್ಸು ಬಿಡದೇ ನಿನ್ನ ನೆನಪಿನೊಳಗೆ ಚಡಪಡಿಸುತ್ತಿತ್ತು. ನೀನು ದೂರದಿ ಅಲ್ಲೆಲ್ಲೋ ಕಾಣುವ ಅನಾಮಿಕ ಪುಟ್ಟ ದ್ವೀಪ. ನಾನು ಅದನ್ನೇ ತದೇಕಚಿತ್ತದಿಂದ ನೋಡುತ್ತ ನಿಂತಿರುವ ಪ್ರೀತಿಯ ಫ‌ಕೀರ. ಭೋರ್ಗರೆವ ಸಾಗರದ ಎದುರು ಈಜಿ ನಿನ್ನ ಸೇರೋದು, ಬೆಂಕಿಯೊಂದಿಗೆ ಸರಸವಾಡುವುದು ಎರಡೂ ಒಂದೇ ಅಂತ ಗೊತ್ತಾಗಿದ್ದೇ ಆವಾಗ.

ನೋಡಿದಷ್ಟೂ ನೋಡುತ್ತಲೇ ಇರಬೇಕು ಎನ್ನುವ ಸರಳ ಚೆಲುವು ನಿನ್ನದು. ನಿರಭ್ರ ಆಕಾಶದಲ್ಲಿ ತೇಲುವ ಬೆಳದಿಂಗಳಂಥ ನಿನಗೆ ಹೇಳದೆ ಕೇಳದೆ ಶುದ್ಧ ಬಿಳಿ ಹಾಳೆಯಂಥ ನನ್ನ ಒಲವಿನಲ್ಲಿ ನಿನ್ನದೇ ಹೆಸರು ಬರೆದಿರುವೆ. ಅಲ್ಲಿ ಬರೀ ನಿನ್ನದೇ ಕನಸು, ನಿನ್ನದೇ ಕಲ್ಪನೆ, ನಿನ್ನದೇ ತುಂಬು ನಿರೀಕ್ಷೆ.

ನಿನ್ನ ಪ್ರೀತಿಯ ಬಲೆಯೊಳಗೆ ಬಿದ್ದಾಗಿನಿಂದ ಊಟ, ನಿದ್ರೆ, ನೀರಡಿಕೆ ಎಲ್ಲವೂ ಮರೆತು ಹೋಗಿದೆ. ನನ್ನೊಳಗಿನ ಬಹುದಿನಗಳ ಪ್ರೀತಿಯೆಂಬ ಸಿಹಿ ಸಂಕಟಕ್ಕೆ ಪೂರ್ಣರಾಮ ಹಾಕಬೇಕೆಂದರೆ ನಮ್ಮ ಪ್ರೀತಿಗೆ ಆದಷ್ಟು ಬೇಗ ನಿನ್ನ ಒಪ್ಪಿಗೆಯ ಮುದ್ರೆಯೊತ್ತಬೇಕು.

ರಂಗನಾಥ್‌ ಗುಡಿಮನಿ

ಟಾಪ್ ನ್ಯೂಸ್

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

Untitled-1

ಸೆಕ್ಯೂರಿಟಿ ಗಾರ್ಡ್‌ ಸೋಗಿನಲ್ಲಿ ಮನೆ ಕಳವು: ನಾಲ್ವರು ಭದ್ರತಾ ಸಿಬ್ಬಂದಿ ಸೇರಿ ಐವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಶ್ರೀಲಂಕಾ ವಿರುದ್ಧ 96ಕ್ಕೆ ಉದುರಿದ ನಮೀಬಿಯಾ

ಶ್ರೀಲಂಕಾ ವಿರುದ್ಧ 96ಕ್ಕೆ ಉದುರಿದ ನಮೀಬಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.