ಕಣ್‌ ಕನ್ನಡಿ


Team Udayavani, Mar 6, 2020, 4:57 AM IST

ಕಣ್‌ ಕನ್ನಡಿ

ಶೇಡ್ಸ್‌ ಅಂದ್ರೆ ಏನಂತ ಗೊತ್ತಲ್ಲ? ತಂಪು ಕನ್ನಡಕಕ್ಕೆ ಶೇಡ್ಸ್‌ ಎನ್ನುತ್ತಾರೆ. ಅದೇ ಶೇಡ್‌ಗಳು ಈಗ ಒಂದು ಹೆಜ್ಜೆ ಮುಂದೆ ಹೋಗಿ, ಮಿರರ್‌ ಶೇಡ್ಸ್‌ ರೂಪ ಪಡೆದಿವೆ. ಅಂದರೆ, ಧರಿಸಿದವರಿಗೆ ಕನ್ನಡಕದಂತೆ, ನೋಡುಗರಿಗೆ ಕನ್ನಡಿಯಂತೆ ಕಾಣುವ ಶೇಡ್ಸ್‌ ಈಗ ಹೆಚ್ಚು ಟ್ರೆಂಡ್‌ ಆಗುತ್ತಿವೆ. ಈ ಬೇಸಿಗೆಯಲ್ಲಿ, ವಾರ್ಡ್‌ರೋಬ್‌ ಅಪ್‌ಡೇಟ್‌ ಮಾಡಬೇಕು ಅಂದುಕೊಂಡಿರುವವರೆಲ್ಲ ಖರೀದಿಸ ಬೇಕಾದ ವಸ್ತು, ಮಿರರ್‌ ಶೇಡ್ಸ್‌.

ದಪ್ಪ ಪ್ರೇಮಿನ ತಂಪು ಕನ್ನಡಕಗಳು, ಚಿಕ್ಕ ಪ್ರೇಮ್‌ನ ತಂಪು ಕನ್ನಡಕಗಳು, ದೊಡ್ಡ ಗ್ಲಾಸ್‌ ತಂಪು ಕನ್ನಡಕಗಳು, ಪ್ರೇಮ್‌ ಇಲ್ಲದ ಬರೀ ಗ್ಲಾಸ್‌ ಉಳ್ಳ ತಂಪು ಕನ್ನಡಕ ಹೀಗೆ ಫ್ಯಾಷನ್‌ ಲೋಕದಲ್ಲಿ ಅದೆಷ್ಟೋ ಪ್ರಕಾರದ ತಂಪು ಕನ್ನಡಕಗಳು ಬಂದವು, ಹೋದವು. ಏವಿಯೇಟರ್‌, ವೇಯೆರರ್‌, ಅಲ್ಲದೆ ಚಿತ್ರ ವಿಚಿತ್ರ ಆಕಾರದ ತಂಪು ಕನ್ನಡಕಗಳು ಇದೀಗ ಮಿರರ್‌ ಶೇಡ್ಸ್‌ನೊಂದಿಗೆ ಲಭ್ಯ ಇವೆ. ಇವುಗಳು ಹೊಸತೇನಲ್ಲ. ಆದರೆ ಟ್ರೆಂಡ್‌ ಆಗುತ್ತಿರುವ ಕಾರಣ ಇವುಗಳಿಗೆ ಬೇಡಿಕೆ ಹೆಚ್ಚಾಗಿವೆ.

ಕ್ಯಾಟ್‌ ಐಗೆ ಹೊಸ ಮೆರಗು
ಹೆಣ್ಣು ಮಕ್ಕಳಷ್ಟೇ ಧರಿಸಬಲ್ಲ ಕ್ಯಾಟ್‌ ಐ ಪ್ರೇಮ್‌ನ ತಂಪು ಕನ್ನಡಕಗಳಲ್ಲಿಯೂ ಬಗೆಬಗೆಯ ಪ್ರಕಾರಗಳನ್ನು ಹೊರತಂದಿದ್ದಾರೆ. ಪ್ರೇಮ್‌ಗಳಲ್ಲಿ ಮುತ್ತು, ವಜ್ರದ ರೀತಿಯ ಅಲಂಕಾರಿಕ ಕಲ್ಲುಗಳು, ಗರಿಗಳು ಮತ್ತು ಅನಿಮಲ್‌ ಪ್ರಿಂಟ್‌ ಬಳಸಿದ್ದಾರೆ. ಚಿರತೆ, ಹುಲಿ, ಹಾವು, ಜೀಬ್ರಾ, ಬೆಕ್ಕು, ಸೇರಿದಂತೆ ಚುಕ್ಕಿ, ಪಟ್ಟೆ ಇರುವ ಪ್ರಾಣಿಗಳ ಮೈಬಣ್ಣವನ್ನು ತಂಪು ಕನ್ನಡಕಗಳ ಪ್ರೇಮ್‌ನಲ್ಲಿ ಬಳಸಿ ಕ್ಯಾಟ್‌ ಐ ಶೈಲಿಗೆ ಹೊಸ ಮೆರಗು ನೀಡಿದ್ದಾರೆ. ಇಂಥ ಪ್ರೇಮ್‌ ಉಳ್ಳ ಮಿರರ್‌ ಶೇಡ್ಸ್‌ ತೊಟ್ಟು ಮಹಿಳೆಯರು, ಹೆಚ್ಚು ಸ್ಟೈಲಿಶ್‌ ಆಗಿ ಕಾಣಿಸೋದು ಸುಳ್ಳಲ್ಲ.

ಗಾಂಧಿ ಮಿರರ್‌ ಶೇಡ್ಸ್‌
ಕೇವಲ ಉರುಟು ಆಕಾರ ಅಲ್ಲದೆ ಷಟ್ಕೊನ, ಪೆಂಟಗನ್‌, ಅಷ್ಟಭುಜ ಆಕಾರದ ಪ್ರೇಮ್‌ಗಳಲ್ಲೂ ಮಿರರ್‌ ಶೇಡ್ಸ್‌ಗಳು ಸಿಗುತ್ತವೆ. ಅಷ್ಟೇ ಅಲ್ಲದೆ, ಹೃದಯಾಕಾರ (ಹಾರ್ಟ್‌ ಶೇಪ್‌), ನಕ್ಷತ್ರ ಆಕಾರ, ಅರ್ಧ ಚಂದ್ರ, ಸೂರ್ಯ ಹಾಗೂ ಐಸ್‌ಕ್ರೀಮ್‌ ಕೋನ್‌ ಆಕಾರಗಳಲ್ಲೂ ಮಿರರ್‌ ಶೇಡ್ಸ್‌ ಲಭ್ಯ. ಲೇಖಕಿ ಜೆ. ಕೆ. ರೌಲಿಂಗ್‌ ಅವರ ಕಾಲ್ಪನಿಕ ಪಾತ್ರ ಹ್ಯಾರಿ ಪಾಟರ್‌ ತೊಡುವ ಕನ್ನಡಕ, ಸುಪ್ರಸಿದ್ಧ ಬ್ಯಾಂಡ್‌ ಬೀಟಲ್ಸ್‌ನ ಸಂಗೀತಗಾರ ಜಾನ್‌ ಲೆನನ್‌ ತೊಡುತ್ತಿದ್ದ ಕನ್ನಡಕ, ಮಹಾತ್ಮ ಗಾಂಧಿಯವರು ತೊಡುತ್ತಿದ್ದ ಕನ್ನಡಕ, ಇವೆಲ್ಲವೂ ಹೊಸ ರೂಪ ಪಡೆದು ಮಿರರ್‌ ಶೇಡ್ಸ್‌ ಆಗಿ ರೂಪಾಂತರಗೊಂಡು, ಹ್ಯಾರಿ ಪಾಟರ್‌ ಮಿರರ್‌ ಶೇಡ್ಸ್‌ , ಜಾನ್‌ ಲೆನನ್‌ ಮಿರರ್‌ ಶೇಡ್ಸ್‌, ಗಾಂಧಿ ಮಿರರ್‌ ಶೇಡ್ಸ್‌ ಎಂದೇ ಹೆಸರು ಪಡೆದಿವೆ. ಇಂಥ ಮಿರರ್‌ ಶೇಡ್ಸ್‌ ಅನ್ನು ಮಹಿಳೆಯರೂ ತೊಡಬಹುದು.

ಹೊಸ ಬಗೆಯ ರನ್ವೇ ಶೀಲ್ಡ್!
ಮಿರರ್‌ ಶೇಡ್ಸ್‌ನ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡಿದ ಕನ್ನಡಕವೆಂದರೆ, ಅದು ರನ್ವೇ ಶೀಲ್ಡ…. ಇದು ಇತರ ಕನ್ನಡಕಗಳಂತೆ ಬಲಗಣ್ಣಿಗೊಂದು, ಎಡಗಣ್ಣಿಗೊಂದು ಗ್ಲಾಸ್‌ ಅಲ್ಲ. ಬದಲಿಗೆ ಇದು ಒಂದೇ ಮಿರರ್‌ ಗ್ಲಾಸ್‌ನಿಂದ ಮಾಡಿದ ಪಟ್ಟಿಯಂಥದ್ದು. ಕನ್ನಡಕಕ್ಕಿಂತ ಹೆಚ್ಚಾಗಿ, ಕಣ್ಣಿಗೆ ಲೋಹದ ಪಟ್ಟಿ ತೊಟ್ಟಂತೆ ಕಾಣುವುದರಿಂದ ಇದರ ಹೆಸರು ರನ್ವೇ ಶೀಲ್ಡ್!

ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.