ಯಶಸ್ಸಿನ ಗುಟ್ಟು ತಿಳಿದವರೆಷ್ಟು?

Team Udayavani, Oct 4, 2019, 5:10 AM IST

“ಯಶಸ್ಸು” ಎಲ್ಲರೂ ಇಷ್ಟಪಡುವ ಪದ. ಈ ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಯಶಸ್ವಿ ಆಗಬೇಕು ಎಂದೇ ಆಶಿಸುತ್ತಾನೆ. ಆದರೆ, ಯಶಸ್ಸು ಎನ್ನುವುದು ಎಲ್ಲರಿಗೂ ಸಿಗುವುದಿಲ್ಲ. ಇಲ್ಲೊಂದು ಕತೆಯಿದೆ…

ಒಬ್ಬ ಗುರುಗಳು ತಮ್ಮ ಶಿಷ್ಯನೊಂದಿಗೆ ಸೇರಿ ಎಲ್ಲಿಗೊ ಹೋಗುತ್ತಿರುತ್ತಾರೆ. ಅವರಿಬ್ಬರು ಒಂದು ತೋಟದ ಬಳಿ ತಲುಪುತ್ತಾರೆ. ಇಬ್ಬರಿಗೂ ತುಂಬಾ ಬಾಯಾರಿಕೆ ಆಗಿದ್ದರಿಂದ ಆ ತೋಟದಲ್ಲಿದ್ದ ಒಂದು ಹಳೆಯದಾದ ಮನೆಯ ಬಳಿ ಹೋಗುತ್ತಾರೆ. ನೋಡುವುದಕ್ಕೆ ಚೆನ್ನಾಗಿ ಫ‌ಲವತ್ತತೆಯಿಂದ ಕೂಡಿದ ಭೂಮಿಯಾಗಿ ಕಂಡರೂ ಆ ತೋಟದ ಪರಿಸ್ಥಿತಿ ನೋಡಿದರೆ ಮಾತ್ರ ಅದರ ಯಜಮಾನ ಅದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಅರ್ಥವಾಗುತ್ತದೆ. ಅಷ್ಟರಲ್ಲಿ ಆ ಮನೆಯಿಂದ ಒಬ್ಬ ವ್ಯಕ್ತಿ ಹೊರ ಗಡೆ ಬರುತ್ತಾನೆ. ಅವನೊಂದಿಗೆ ಅವನ ಹೆಂಡತಿ ಮತ್ತು ಮೂರು ಜನ ಮಕ್ಕಳು ಕೂಡ ಇರುತ್ತಾರೆ. ಅವರು ಹಳೆಯ ಬಟ್ಟೆಗಳನ್ನು ಧರಿಸಿರುತ್ತಾರೆ. ಆ ಗುರುಗಳು ಆತನೊಂದಿಗೆ “”ಕುಡಿಯುವುದಕ್ಕೆ ನೀರು ಸಿಗುತ್ತಾ?” ಎಂದು ಕೇಳುತ್ತಾರೆ. ಆಗ ಅವನು ಕುಡಿಯಲು ನೀರು ಕೊಡುತ್ತಾನೆ. ಆಗ ಗುರುಗಳು ಹೀಗೆನ್ನುತ್ತಾರೆ, “”ನಿಮ್ಮ ತೋಟ ನೋಡುವುದಕ್ಕೆ ಸುಂದರವಾಗಿ ಫ‌ಲವತ್ತತೆ ತುಂಬಿದ ಭೂಮಿಯಂತೆ ಕಾಣುತ್ತದೆ. ಆದರೆ, ಈ ತೋಟದಲ್ಲಿ ಯಾವುದೇ ರೀತಿಯ ಬೆಳೆಯನ್ನು ಬೆಳೆದಿಲ್ಲ. ಆದರೂ ನಿಮಗೆ ಹಣ ಎಲ್ಲಿಂದ ಬರುತ್ತದೆ? ನಿಮ್ಮ ಜೀವನ ಹೇಗೆ ಕಳೆಯುತ್ತೀರಿ?” ಎಂದು ಕೇಳುತ್ತಾರೆ. ಆಗ ಅವರು, “”ತಮ್ಮ ಬಳಿ ಒಂದು ಹಸು ಇದೆ, ಅದು ಹಾಲನ್ನು ಕೊಡುತ್ತದೆ. ಆ ಹಾಲನ್ನು ಮಾರಿದರೆ ಸ್ವಲ್ಪ ಹಣ ಸಿಗುತ್ತದೆ ಮತ್ತು ಉಳಿದ ಹಾಲನ್ನು ಕುಡಿದು ನಮ್ಮ ಜೀವನ ಕಳೆಯುತ್ತೇವೆ” ಎಂದು ಹೇಳುತ್ತಾನೆ.

ಅದಾಗಲೇ ಕತ್ತಲಾಗಿದ್ದರಿಂದ ಗುರುಶಿಷ್ಯರು ಆ ದಿನ ಆ ರಾತ್ರಿ ಅಲ್ಲಿಯೆ ಉಳಿದು ಕೊಳ್ಳುತ್ತಾರೆ. ಮಧ್ಯರಾತ್ರಿಯಲ್ಲಿ ಗುರುಗಳು ಶಿಷ್ಯನನ್ನು ಎಬ್ಬಿಸಿ ನಾವು ಇಲ್ಲಿಂದ ಕೂಡಲೇ ಹೊರಟು ಹೋಗಬೇಕು ಮತ್ತು ಹೋಗುವಾಗ ಅವರ ಹಸುವನ್ನು ಒಟ್ಟಿಗೆ ಒಯ್ಯಬೇಕು ಎಂದು ಹೇಳುತ್ತಾರೆ. ಆ ಗುರುಗಳು ಹೇಳಿದ್ದನ್ನು ಕೇಳಿದ ಶಿಷ್ಯನಿಗೆ ಅದು ಇಷ್ಟವಾಗು ವು ದಿಲ್ಲ. ಆದರೆ, ಗುರುಗಳ ಮಾತು ಮೀರಲಾಗದೆ ಆ ಹಸುವನ್ನು ಜೊತೆಗೆ ಒಯ್ಯುತ್ತಾನೆ.

ಈ ಘಟನೆ ಆ ಶಿಷ್ಯನ ತಲೆಯಲ್ಲಿ ಹಾಗೇ ಉಳಿದು ಬಿಡುತ್ತದೆ. ಕೆಲವು ವರ್ಷಗಳ ನಂತರ ಆ ಶಿಷ್ಯ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಆ ವ್ಯಕ್ತಿಯನ್ನು ಭೇಟಿ ಮಾಡಿ ಅವರಿಗೆ ಸಹಾಯ ಮಾಡಬೇಕೆಂದು ಆ ತೋಟದ ಹತ್ತಿರ ಹೋಗುತ್ತಾನೆ. ಖಾಲಿ ಯಾಗಿ ಬಿದ್ದಿದ್ದ ಆ ತೋಟ ಈಗ ಹಣ್ಣಿನ ತೋಟವಾಗಿ ಬೆಳವಣಿಗೆ ಆಗಿರುವುದನ್ನು ಆತ ಗಮನಿಸುತ್ತಾನೆ. ಆ ವ್ಯಕ್ತಿಯು ತೋಟವನ್ನು ಯಾರಿಗೋ ಮಾರಿ ಎಲ್ಲಿಗೋ ಹೋಗಿರಬೇಕು ಎಂದುಕೊಳ್ಳುತ್ತಾನೆ.

ಅಷ್ಟ ರಲ್ಲಿ ಆ ವ್ಯಕ್ತಿಯೇ ಅಲ್ಲಿಗೆ ಬರು ತ್ತಾನೆ. ಆ ವ್ಯಕ್ತಿಯ ಬಳಿ ತನ್ನ ಪರಿಚಯ ಹೇಳುತ್ತಾನೆ. ಆಗ ಆ ವ್ಯಕ್ತಿ, “”ಹೌದೌದು, ಅಂದು ನೀವು ನನಗೆ ಹೇಳದೆಯೇ ಹೊರಟು ಹೋಗಿದ್ದೀರಿ. ಅದೇನಾಯೊ¤ ಗೊತ್ತಿಲ್ಲ. ಅದೇ ದಿವಸ ನಮ್ಮ ಹಸು ಕಳುವಾಗಿ ಹೋಯಿತು. ಅನಂತರ ಸ್ವಲ್ಪ ದಿನದ ಮಟ್ಟಿಗೆ ಏನು ಮಾಡುವುದು ಗೊತ್ತಾಗಲಿಲ್ಲ. ಆದರೆ, ಬದುಕುವುದಕ್ಕೆ ಏನಾದರೂ ಒಂದು ಮಾಡಬೇಕಲ್ಲ. ಇದರಿಂದ ಸೌದೆಗಳನ್ನು ಸೀಳಿ ಮಾರುವುದನ್ನು ಪ್ರಾರಂಭಿಸಿದೆ. ಅದರಿಂದ ಸ್ವಲ್ಪ ಹಣ ಸಂಗ್ರಹಿಸಿ ತೋಟದಲ್ಲಿ ಬೆಳೆ ಯನ್ನು ಹಾಕಿದೆ. ಬೆಳೆ ಚೆನ್ನಾಗಿ ಬೆಳೆಯಿತು. ಅವನ್ನು ಮಾರಿ ಬಂದ ಹಣದಿಂದ ಹಣ್ಣಿನ ಗಿಡಗಳನ್ನು ನೆಟ್ಟಿದ್ದೇನೆ. ಈ ಕೆಲಸ ತುಂಬ ಚೆನ್ನಾಗಿದೆ. ಈಗ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಲ್ಲರಿಗಿಂತಲೂ ದೊಡª ಹಣ್ಣಿನ ವ್ಯಾಪಾರಿ ನಾನು. ಒಂದು ವೇಳೆ ಆ ದಿನ ನನ್ನ ಹಸು ಕಳುವಾಗದೆ ಇದ್ದಿದ್ದರೆ ಇವೆಲ್ಲ ನಡೆಯುತ್ತಿರಲ್ಲವೇನೋ” ಎನ್ನುತ್ತಾನೆ.

ಆಗ ಆ ಶಿಷ್ಯ ಅವನ ಬಳಿ, “”ಇದನ್ನು ನೀವು ಮುಂಚೆಯೂ ಕೂಡ ಮಾಡಬಹು ದಿತ್ತಲ್ಲ?” ಎಂದು ಕೇಳುತ್ತಾನೆ. ಆಗ ಅವನು, “”ಹೌದು ಮಾಡಬಹುದಿತ್ತು. ಆದರೆ ಆ ಸಮಯದಲ್ಲಿ ಅಷ್ಟು ಕಷ್ಟ ಬೀಳುವ ಅಗತ್ಯ ಇಲ್ಲದಂತೆ ನಮ್ಮ ಜೀವನ ಕಳೆಯುತಿತ್ತು. ನನ್ನಲ್ಲಿ ಇಷ್ಟೊಂದು ಸಾಮರ್ಥ್ಯ ಇದೆ ಎಂದು ನನಗೆ ಯಾವಾಗಲೂ ಅನಿಸಿಲ್ಲ. ಯಾವಾಗ ನನ್ನ ಹಸು ಕಳುವಾಯಿತೋ ಆಗ ಮೈಬಗ್ಗಿಸಿ ಕೆಲಸ ಮಾಡಲೇಬೇಕಾಯಿತು. ಅದರ ಪ್ರತಿಫ‌ಲವೇ ಇದು”- ಎನ್ನುತ್ತಾನೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಮರ್ಥ್ಯವನ್ನು ತಾನು ಅರಿತುಕೊಂಡಾಗ ಮಾತ್ರ ಅವನು ಯಶಸ್ಸಿನತ್ತ ಹೆಜ್ಜೆ ಹಾಕಲು ಸಾಧ್ಯ.

ನಾವು ಸಹ ಪ್ರಸ್ತುತ ಜೀವಿಸುತ್ತಿರುವ ಈ ಜೀವನವನ್ನು ಇನ್ನೂ ಉತ್ತಮವಾಗಿ ಅಭಿವೃದ್ಧಿ ಮಾಡಿಕೊಳ್ಳಲು ಇಂಥ ಉದಾಹರಣೆಯಂಥ ಹಸು ತಡೆಯುತ್ತಿಲ್ಲ ತಾನೆ? ಸ್ವಲ್ಪ ಆಲೋಚನೆ ಮಾಡಿ ಹಾಗೆ ಅನಿಸಿದರೆ ಕಟ್ಟಿ ಹಾಕಿದ ಆ ಮನಸ್ಥಿತಿಯನ್ನು ಕೂಡಲೇ ತ್ಯಜಿಸಬೇಕು. ಒಂದು ವೇಳೆ ಧೀರೂಭಾಯಿ ಅಂಬಾನಿ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಬಿಡದೇ ಇದ್ದಿದ್ದರೆ ಈ ದಿನ ನಮಗೆ ರಿಲಾಯನ್ಸ್ ನಂತಹ ಒಂದು ಕಂಪೆನಿ ಇರುತ್ತಿರಲಿಲ್ಲ ವೇನೊ. ನಾರಾಯಣ ಮೂರ್ತಿಯವರು ಪಬ್ಲಿಕ್‌ ಕಂಪ್ಯೂಟರ್‌ನಲ್ಲಿ ಕೆಲಸ ಬಿಡದೇ ಇದ್ದಿದ್ದರೆ ಇವತ್ತು “ಇನ್ಫೋಸಿಸ್‌’ ಅನ್ನುವ ದೊಡ್ಡ ಕಂಪೆನಿ ಇರುತ್ತಿರಲಿಲ್ಲವೇನೋ! ಅವರೆಲ್ಲರೂ ಕೂಡಾ ಜೀವನದಲ್ಲಿ ದೊಡª ಗುರಿಯನ್ನು ಇಟ್ಟುಕೊಂಡಿದ್ದರು ಹಾಗೂ ತಮ್ಮ ಮನಸ್ಸು ಹೇಳಿದಂತೆ ಕೇಳಿದವರು. ಯಾರು ತಮ್ಮ ಜೀವನದ ಬಗ್ಗೆ ದೊಡª ಕನಸು ಕಾಣುತ್ತಾನೋ, ಏನಾದರೂ ಸಾಧಿಸಬೇಕು ಎನ್ನುವ ಬಲವಾದ ಕೋರಿಕೆ ಇರುತ್ತದೋ ಅವನು ಮಾತ್ರವೇ ಇಂತಹ ಹೆಜ್ಜೆ ತೆಗೆದುಕೊಳ್ಳಬಹುದು. ಅಂತಹವರು ಅಕ್ಕಪಕ್ಕದವರು ಹೇಳುವ ಮಾತುಗಳನ್ನು ಲೆಕ್ಕಿಸುವುದಿಲ್ಲ. ಕೇವಲ ಅವರು ಮಾಡಬೇಕೆಂದಿರುವುದರ ಬಗ್ಗೆಯೇ ಗಮನ ಹರಿಸುತ್ತಾರೆ. ಈ ಪ್ರಪಂಚದಲ್ಲಿ ಎಂತಹ ಶಕ್ತಿಯು ಕೂಡ ನಾವು ಸಕ್ಸಸ್‌ ಆಗುವುದನ್ನು ತಡೆಯಲು ಸಾಧ್ಯವೇ ಇಲ್ಲ.

ತ್ರಿಶಾ
ಪತ್ರಿಕೋದ್ಯಮ ವಿಭಾಗ ಎಂ.ಪಿ.ಎಂ ಕಾಲೇಜು, ಕಾರ್ಕಳ


ಈ ವಿಭಾಗದಿಂದ ಇನ್ನಷ್ಟು

  • ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು...

  • ಜೀವನದಲ್ಲಿ ಮೊದಲ ಬಾರಿಗೆ ಮೊಬೈಲನ್ನು ಬಿಟ್ಟು ಒಂದು ವಾರ ಕಳೆದ ಅನುಭವ ಈ ರಜೆಯಲ್ಲಿ ನನ್ನದಾಗಿತ್ತು. ಇಂದು ಒಂದು ಸಣ್ಣ ಕಲ್ಲನ್ನು ಈ ಕಡೆಯಿಂದ ಆಕಡೆ ಇಟ್ಟರೂ ಫೋಟೋ...

  • ನಾನು ನೋಡಿದ ಮೊದಲ ವೀರ ಅಂತಾರಲ್ಲ, ಹಾಗೆಯೇ ನನ್ನ ಜೀವನದಲ್ಲಿ ನಾನು ಕಂಡ ಮೊದಲನೆಯ ಧೀರ ನನ್ನ ಅಪ್ಪ. ಎಲ್ಲರ ಜೀವನದಲ್ಲಿ ಒಬ್ಬೊಬ್ಬರು ಆದರ್ಶ ವ್ಯಕ್ತಿಗಳಿರುತ್ತಾರೆ....

  • ಮಳೆ ಒಂದೇ ಸಮನೆ ಸುರಿಯುತ್ತಿತ್ತು. ನಾನು ನನ್ನ ಗೆಳತಿಯರೊಂದಿಗೆ ಬ್ಯಾಗ್‌ ಅನ್ನು ಎದೆಗವಚಿಕೊಂಡು ಒಂದು ಕೊಡೆಯಲ್ಲಿ ಇಬ್ಬರು ಎಂಬಂತೆ ನಾಲ್ಕು ಜನ ಬರುತ್ತಿದ್ದೆವು....

  • ಸ್ಪಿಸ್‌ (SPYSS-Shri Pathanjali Yoga Shikshana Samithi) ಎಂದ ಮೇಲೆ ಎಲ್ಲರಿಗೂ ನೆನಪಾಗುವುದು ಪತಂಜಲಿ ಯೋಗ ಸೇವಾ ಸಮಿತಿ. ನನಗೆ ಕೂಡ ಯೋಗ ಕಲಿಯಬೇಕೆಂಬ ಆಸೆ ಇತ್ತು. ಈ ಆಸೆಯ ಈಡೇರಿಕೆ ಆದದ್ದು...

ಹೊಸ ಸೇರ್ಪಡೆ