ರಾಜ್ಯ ಸರ್ಕಾರದಿಂದ ಸಾರಿಗೆ ಕಾರ್ಮಿಕರಿಗೆ ಅನ್ಯಾಯ


Team Udayavani, Apr 14, 2021, 5:27 PM IST

14-11

ಹರಿಹರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಸೋಮವಾರ ಆರು ದಿನ ಪೂರೈಸಿದ್ದು, ಸೋಮವಾರ ನಗರದ ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ಮಿನಿ ವಿಧಾನಸೌಧದ ಎದುರು ನೌಕರರ ಕುಟುಂಬಸ್ಥರು ತಟ್ಟೆ-ಲೋಟ ಬಡಿಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ಮಿನಿ ವಿಧಾನಸೌಧದ ಬಳಿ ಬೆಳಿಗ್ಗೆ 11 ಗಂಟೆಗೆ ಜಮಾಯಿಸಿದ ಚಾಲಕ-ನಿರ್ವಾಹಕರ ಕುಟುಂಬದ ಸದಸ್ಯರು ತಾಲೂಕು ಕಚೇರಿ ಮುಂದೆ ಕೆಲ ಹೊತ್ತು ತಟ್ಟೆ-ಲೋಟ ಬಡಿದು ಪ್ರತಿಭಟಿಸಿದರು. ನಂತರ ತಹಶೀಲ್ದಾರ್‌ ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಶೀಲಾ ಎಂ., ಕಳೆದ ಡಿಸೆಂಬರ್ ‌ನಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವ ಬೇಡಿಕೆ ಹೊರತುಪಡಿಸಿ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನಿಗದಿ  ಸೇರಿದಂತೆ ಇತರೆ ಎಂಟು ಪ್ರಮುಖ ಬೇಡಿಕೆಗಳನ್ನು ಮೂರು ತಿಂಗಳಲ್ಲಿ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈಗ ವೇತನ ಹೆಚ್ಚಳ ಸಾಧ್ಯವಿಲ್ಲ ಎನ್ನುವ ಮೂಲಕ ಬಡ ಕಾರ್ಮಿಕರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.

ಕಾವ್ಯ ಮಾತನಾಡಿ, ಅಧಿಕಾರಿಗಳು ನಮ್ಮ ಮನೆಗೆ ಬಂದು ಹೆದರಿಸಿ ಬೆದರಿಸಿ ಕೆಲಸಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ನ್ಯಾಯಯುತ ಬೇಡಿಕೆಗೆ ಮುಷ್ಕರ ನಡೆಸುತ್ತಿರುವವರನ್ನು ಹತ್ತಿಕ್ಕಲು ವರ್ಗಾವಣೆ ಮಾಡುವುದು, ಕೆಲಸದಿಂದ ವಜಾಗೊಳಿಸುವಂತಹ ಕ್ರಮ ಕೈಗೊಂಡು ಸರ್ಕಾರ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದಿರಾ ಮಾತನಾಡಿ, ಆರು ದಿನಗಳ ಮುಷ್ಕರ ಯಶಸ್ವಿಯಾಗಿದೆ. ಅಲ್ಲೊಂದು, ಇಲ್ಲೊಂದು ಬಸ್‌ ಸಂಚರಿಸುತ್ತಿದೆ ಎಂದು ಎದೆಗುಂದುವುದು ಬೇಡ. ನಮ್ಮ ನೌಕರರು ಯಾರೂ ಬಸ್‌ ಓಡಿಸುತ್ತಿಲ್ಲ. ಖಾಸಗಿ ಚಾಲಕರನ್ನು ಕರೆದುಕೊಂಡು ಬಂದಿದ್ದಾರೆ.

ಕೆಲಸ ಮಾಡಲು ಆಗದಂತಹ ಅಸಹಾಯಕರನ್ನು ಹೆದರಿಸಿ ಬೆದರಿಸಿ ಕೆಲಸ ಮಾಡಿಸುತ್ತಿದ್ದಾರೆ. ಮುಷ್ಕರ ಮುರಿಯಲು ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ. ನೌಕರರು ಗೊಂದಲಕ್ಕೆ ಒಳಗಾಗಬಾರದು ಎಂದರು. ಪ್ರತಿಭಾ ಮಾತನಾಡಿ, ಸರ್ಕಾರ ಕೂಡಲೇ ಮಾರ್ಚ್‌ ತಿಂಗಳ ವೇತನ ಬಿಡುಗಡೆ ಮಾಡಬೇಕು. ವಜಾ ಹಾಗೂ ವರ್ಗಾವಣೆ ಆದೇಶಗಳನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ನಾವು ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಆಶಾ, ಮಧು, ಬಿಂದು, ಗೀತಾ, ನಾಗರತ್ನ, ಉಮಾರಾಣಿ, ಲಕ್ಷ್ಮೀ, ಅಕ್ಷತಾ ಸೇರಿದಂತೆ ಸಾರಿಗೆ ನೌಕರರ ನೂರಾರು ಕುಟುಂಬಸ್ಥರು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-rrewrwer

DD Kisan ವಾಹಿನಿಯಲ್ಲಿ ಇಂದಿನಿಂದ ಎಐ ನಿರೂಪಕರಿಂದ ಸುದ್ದಿ ವಾಚನ!

1-sadsdsad

Deepika Padukone; ಗರ್ಭಿಣಿಯೆಂದು ಸುದ್ದಿ ನೀಡಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡರು

Kedarnath

Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqewqeqwe

Davanagere; ಪೊಲೀಸ್ ಕಸ್ಟಡಿಯಲ್ಲಿದ್ದ ಅರೋಪಿ ಸಾವು: ಭಾರೀ ಹಿಂಸಾಚಾರ

ಕಾಂಗ್ರೆಸ್ ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Congress ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Elephants ಬಿಸಿಲಿನ ತಾಪ: 4 ತಿಂಗಳಲ್ಲಿ 22 ಆನೆಗಳ ಸಾವು

Elephants ಬಿಸಿಲಿನ ತಾಪ: 4 ತಿಂಗಳಲ್ಲಿ 22 ಆನೆಗಳ ಸಾವು

women trafficking

Honnali; ಕೆಲಸಕ್ಕೆಂದು ಕರೆದುಕೊಂಡು ಒಂದು ಲಕ್ಷ ರೂ ಗೆ ಮಹಿಳೆಯ ಮಾರಾಟ!

9-davangere

Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

COMEDK: ಬೆಂಗಳೂರಿನ ಬಾಲಸತ್ಯ ಸರವಣನ್‌ಗೆ ಫ‌ಸ್ಟ್‌ ರ್‍ಯಾಂಕ್‌

COMEDK UGET Result: ಬೆಂಗಳೂರಿನ ಬಾಲಸತ್ಯ ಸರವಣನ್‌ಗೆ ಫ‌ಸ್ಟ್‌ ರ್‍ಯಾಂಕ್‌

1-rrewrwer

DD Kisan ವಾಹಿನಿಯಲ್ಲಿ ಇಂದಿನಿಂದ ಎಐ ನಿರೂಪಕರಿಂದ ಸುದ್ದಿ ವಾಚನ!

1-sadsdsad

Deepika Padukone; ಗರ್ಭಿಣಿಯೆಂದು ಸುದ್ದಿ ನೀಡಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡರು

Kedarnath

Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು

court

Equestrian: ಆಡಳಿತ ನಿರ್ವಹಣೆಗೆ ಸಮಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.