ಆಕರ್ಷಣೀಯ ನೃತ್ಯ ನಿಕೇತನದ ನರ್ತನ ಯಾನ

ತ್ರಿದಶಮಾನ ನರ್ತನಯಾನ ಕಾರ್ಯಕ್ರಮ

Team Udayavani, Jan 17, 2020, 1:22 AM IST

an-49

ಶಾಸ್ತ್ರೀಯ ನೃತ್ಯದ ಚೌಕಟ್ಟಿನಲ್ಲಿಯೇ ನಡೆದ ಕೃಷ್ಣ ಲೀಲಾ ವಿನೋದದ ಮೊದಲ ರೂಪಕ ಸಂವಹನದ ಯಾವ ನೆಲೆಯಲ್ಲಿಯೂ ತೊಡಕಾಗದೆ ಆಕರ್ಷಣೀಯವಾಗಿತ್ತು. ಕವಿ ನಾರಾಯಣ ಐತಾಳರ ಸಾಹಿತ್ಯ ಕೃತಿ ರಾಸಲೀಲೆ ಆಧರಿಸಿದ ಈ ರೂಪಕ ತನ್ನ ಚುರುಕು ಸಂಚಾರದಲ್ಲಿ ಅದಕ್ಕೊಪ್ಪುವ ನಾಟ್ಯಬಂಧಗಳೊಂದಿಗೆ ಸೆಳೆಯಿತು.

ವಿ|ಲಕ್ಷ್ಮೀ ಗುರುರಾಜ್‌ ನೇತೃತ್ವದ ನೃತ್ಯನಿಕೇತನ ಉಡುಪಿಯು ತನ್ನ ಸಾಧನೆಯ ಸಂಕೇತವಾಗಿ ನೃತ್ಯಾಸಕ್ತರ ಗಮನ ಸೆಳೆಯುವಂಥ ಕ್ರಿಯಾಶೀಲ ಹೆಜ್ಜೆಯನ್ನಿರಿಸಿದೆ. ಮೂರು ದಶಕಗಳ ತನ್ನ ಅಸ್ತಿತ್ವದ ಸಿಂಹಾವಲೋಕನದೊಂದಿಗೆ ಉತ್ಸಾಹದ ಮುನ್ನೋಟಕ್ಕೆ ಅಣಿಯಾಗಲು ಸಂಭ್ರಮದಿಂದ “ತ್ರಿದಶಮಾನ ನರ್ತನಯಾನ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದ ಆಚಾರ್ಯರ ಪ್ರೋತ್ಸಾಹದ ನುಡಿಗಳೊಂದಿಗೆ ಇತ್ತೀಚೆಗೆ ಸಂಯೋಜಿಸಿದೆ. ಲಕ್ಷ್ಮೀ ಗುರುರಾಜ್‌ ತನ್ನ ಸಂಘಟನಾ ಶಕ್ತಿ ಮತ್ತು ಕಲಾಪ್ರತಿಭೆಯನ್ನು ಏಕನಿಟ್ಟಿನಲ್ಲಿ ಶ್ರುತಪಡಿಸಿದರು.

ಉಡುಪಿ ಅಂಬಲಪಾಡಿಯ ಜನಾರ್ದನಸ್ವಾಮಿ ಬಯಲು ರಂಗಮಂದಿರದಲ್ಲಿ ನಡೆದ ಈ ಯಾನದ ಪ್ರಾರಂಭ ಸಂಸ್ಥೆಯ ಮುಂದಿನ ಕನಸುಗಳ ಬಗೆಗೆ ಕುತೂಹಲವನ್ನುಂಟುಮಾಡುವಂತೆ ಮೂಡಿ ಬಂದಿತು. ಸುಮಾರು 150ಕ್ಕೂ ಮಿಕ್ಕಿ ಎಳೆಯ-ಇಂದಿನ, ಹಿಂದಿನ ಶಿಷ್ಯವೃಂದದ ನೃತ್ಯ ಬದ್ಧ ಶೋಭಾಯಾತ್ರೆಯು ದೇವಿಯ ಸನ್ನಿಧಾನದಲ್ಲಿ ಮಂಗಲಾರ್ಪಿತವಾದಾಗ ನೋಟಕರಿಗೆ ಭಾರತೀಯ ನೃತ್ಯದ ಅಧ್ಯಾತ್ಮದ ಬೇರು ಚಿಗುರಿದಂತನ್ನಿಸಿತು.

ಸಭಾಕಾರ್ಯಕ್ರಮದ ಅನಂತರ ರಸಿಕರನ್ನು ರಂಜಿಸಿದ ಎರಡು ನೃತ್ಯರೂಪಕಗಳು ಲಕ್ಷ್ಮೀ ಗುರುರಾಜರ ನೃತ್ಯನೋಟಗಳ ಮತ್ತು ಅಧ್ಯಯನದ ಪರಿಣಾಮಕಾರಿ ಫ‌ಲಿತಾಂಶವಾಗಿ ಪ್ರದರ್ಶನಗೊಂಡಿದೆ. ಶಾಸ್ತ್ರೀಯ ನೃತ್ಯದ ಚೌಕಟ್ಟಿನಲ್ಲಿಯೇ ನಡೆದ ಸುಪರಿಚಿತ ಕೃಷ್ಣ ಲೀಲಾ ವಿನೋದದ ಮೊದಲ ರೂಪಕ ಸಂವಹನದ ಯಾವ ನೆಲೆಯಲ್ಲಿಯೂ ತೊಡಕಾಗದೆ ಆಕರ್ಷಣೀಯವಾಗಿತ್ತು. ಕುಂದಾಪುರದ ಕವಿ ನಾರಾಯಣ ಐತಾಳರ ಸಾಹಿತ್ಯ ಕೃತಿ ರಾಸಲೀಲೆ ಆಧರಿಸಿದ ಈ ರೂಪಕ ತನ್ನ ಚುರುಕು ಸಂಚಾರದಲ್ಲಿ ಅದಕ್ಕೊಪ್ಪುವ ನಾಟ್ಯಬಂಧಗಳೊಂದಿಗೆ ಸಹೃದಯರನ್ನು ಸೆಳೆಯಿತು. ಬಾಲಕೃಷ್ಣನ ತುಂಟತನದ ಅಭಿನಯ ಒಂದು ಮಿತಿಯೊಳಗೆ ವಸ್ತುವಿಗೆ ಮೆರುಗಿನ ಎತ್ತರವನ್ನು ನೀಡಿತು. ಕೃಷ್ಣನ ಕೊಳಲಿನ ಕರೆಗೆ ಆಕರ್ಷಿತರಾಗಿ ರಂಗಕ್ಕೆ ಧುಮುಕಿದ ಗೋಪಗೋಪಿಕೆಯರು ರೂಪಕದುದ್ದಕ್ಕೂ ತಮ್ಮ ಕೃಷ್ಣಾಸಕ್ತಿಯನ್ನು ಭಾವಾಭಿವ್ಯಕ್ತಿಯ ಮೂಲಕ ವ್ಯಕ್ತ ಪಡಿಸುತ್ತಾ ರಂಗಕೃತಿಯ ರಸಕ್ಷಣಗಳನ್ನು ಸಹೃದಯರು ಆಸ್ವಾದಿಸುವಂತೆ ಅಭಿನಯಿಸಿದರು. ಗೋಪಿಕೆಯರ ಕ್ಷಿಪ್ರ ಆದರೆ ಕಲಾತ್ಮಕ ನಡೆ ರಂಗ ಲೇಖನಕ್ಕೆ ಶಿಸ್ತುಬದ್ಧ ವಿನ್ಯಾಸವನ್ನು ನೀಡಿತು.

ಎರಡನೇ ಪ್ರಯೋಗ “ಕನಕಮೃಗ’ (ರಚನೆ: ಡಾ| ಉಪ್ಪಂಗಳ ರಾಮ ಭಟ್‌) ನೃತ್ಯನಾಟಕ ಪರಿಧಿಯಲ್ಲಿ ವಿವಿಧ ರಂಗಶಿಲ್ಪಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ರಾಮಾಯಣದ ಸೀತಾಪಹರಣದ ಕಥಾವಸ್ತುವನ್ನೊಳಗೊಂಡ ಈ ರೂಪಕವು ಕಾವ್ಯಧ್ವನಿ – ನೃತ್ಯ ಸಮ್ಮಿಲನದ ಸರಳ ಸುಂದರ ಚೌಕಟ್ಟಿನೊಳಗೆ ನೇರವಾಗಿ ರಸಿಕರನ್ನು ಆಕರ್ಷಿಸಿತು. ಒಂದು ಸಾಹಿತ್ಯಕೃತಿಯನ್ನು ಸರಳವಾಗಿ ದುಡಿಸಿಕೊಳ್ಳುವುದರಲ್ಲಿ ಈ ನೃತ್ಯನಾಟಕ ಯಶಸ್ಸನ್ನು ಕಂಡಿತು. ರಾವಣನ ಪ್ರವೇಶದ ಭ್ರಮರಿ ಮತ್ತು ಕ್ರೌರ್ಯ-ಚಾಂಚಲ್ಯದ ಅಭಿನಯ ಮನಸೆಳೆಯುವಂತಿತ್ತು.

ಎರಡೂ ಪ್ರಯೋಗಗಳಲ್ಲಿ – ಶಾಸ್ತ್ರೀಯ ಚೌಕಟ್ಟನ್ನು ಹೊಂದಿದ್ದರೂ ನೃತ್ಯಾಂಶಗಳ ಪ್ರತಿಪಾದನೆಯ ಕೊರತೆ – ಶಾಸ್ತ್ರೀಯ ನೃತ್ಯಾರಾಧಕರಿಗೆ ತುಸು ನಿರಾಸೆಯನ್ನುಂಟುಮಾಡೀತು. ಆದರೆ ನೃತ್ಯ-ನೃತ್ತದ ವ್ಯಾಕರಣ ಬೇರೆ, ನಾಟಕದ ಪಾತ್ರಾಭಿನಯ ಬೇರೆ ಎಂಬ ಸೂಕ್ಷ್ಮವನ್ನು ಆಹಾರ್ಯದ ಮತ್ತು ರಂಗನಡೆಯ ದೃಷ್ಟಿಯಿಂದ ಚೆನ್ನಾಗಿ ಅಥೆìçಸಿ ನಿರ್ದೇಶಕರು ಈ ದಾರಿಯನ್ನು ಹಿಡಿದಿ¨ªಾರೆ ಎಂದೆನ್ನಿಸಿದರೆ ಈ ಕೊರತೆ ರಸಾಸ್ವಾದನೆಗೆ ಅಡ್ಡಿಯಾಗದು. ನೃತ್ಯದ ಶಾಸ್ತ್ರೀಯತೆಯ ಸೂಕ್ಷ್ಮಗಳನ್ನರಿಯದೆಯೂ ಕಲಾಸಹೃದಯರು ಮತ್ತು ತಮ್ಮ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವ ಅಪಾರ ಸಂಖ್ಯೆಯ ಹೆತ್ತವರು ಆನಂದಿಸಲು ಅನುಕೂಲವಾಗುವಂತೆ ಈ ರೂಪಕಗಳು ಸಂಯೋಜನೆಗೊಂಡಿದ್ದವು.

ಸೂಕ್ತ ಗಾಯನ- ವಾದನಗಳ ಹಿನ್ನೆಲೆ ಪೂರಕ ವಾತಾವರಣದ ನಿರ್ಮಾಣಕ್ಕೆ ಸಹಕಾರಿಯಾಯಿತು. ಎರಡೂ ಪ್ರಯೋಗಗಳಲ್ಲಿ ನವಿಲು ಜಿಂಕೆ ಹಂಸಗಳ ನರ್ತನ ವಿಲಾಸವು ಆಕರ್ಷಣೀಯವಾಗಿ ಮೂಡಿಬಂದಿದೆ.

ಉದ್ಯಾವರ ಮಾಧವ ಆಚಾರ್ಯ

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.