ಸುವರ್ಣ ಪರ್ವದಲ್ಲಿ ಅನಾವರಣಗೊಂಡ ನಾಟಕಗಳು

ನಿಟ್ಟೂರು ಪ್ರೌಢಶಾಲೆ ವಿದ್ಯಾರ್ಥಿಗಳ ಪ್ರಸ್ತುತಿ

Team Udayavani, Dec 27, 2019, 1:03 AM IST

58

ಸರ್ಪ ಸಂತತಿಯನ್ನು ಗರುಡನಿಂದ ಕಾಪಾಡಿದ ಜೀಮೂತ ವಾಹನನೇ ನಾಟಕದ ನಾಯಕ. ತನ್ನ ಶರೀರವನ್ನೇ ದಾನವಾಗಿತ್ತ ತ್ಯಾಗಿ, ಪರೋಪಕಾರ ಜೀವಿಯೊಂದರ ಬದುಕಿನ ಹಕ್ಕನ್ನು ಗೌರವಿಸುವುದು ನಾಟಕ ಅನಾವರಣಗೊಳಿಸುವ ಜೀವನ ಮೌಲ್ಯಗಳು.

ನಿಟ್ಟೂರು ಪ್ರೌಢಶಾಲೆ ವಾರ್ಷಿಕೋತ್ಸವ ಮತ್ತು ಸುವರ್ಣ ಪರ್ವ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಎರಡು ನಾಟಕಗಳು ಮೆಚ್ಚುಗೆಗಳಿಸಿದವು. ವಾರ್ಷಿಕೋತ್ಸವದಂದು ಶಾಲಾ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ನಾಟಕ ಜೀಮೂತ ವಾಹನ. ಸಂಸ್ಕೃತ ಕವಿ ಶ್ರೀಹರ್ಷ ರಚಿಸಿದ ನಾಗಾನಂದ ಈ ನಾಟಕದ ಮೂಲ, ಹೊಸರೂಪದಲ್ಲಿ ಕನ್ನಡಕ್ಕೆ ತಂದವರು ಎಚ್‌.ಎಸ್‌. ವೆಂಕಟೇಶ್‌ ಮೂರ್ತಿ.

ಸರ್ಪ ಸಂತತಿಯನ್ನು ಗರುಡನಿಂದ ಕಾಪಾಡಿದ ಜೀಮೂತ ವಾಹನನೇ ನಾಟಕದ ನಾಯಕ. ತನ್ನ ಶರೀರವನ್ನೇ ದಾನವಾಗಿತ್ತ ತ್ಯಾಗಿ, ಪರೋಪಕಾರ ಜೀವಿಯೊಂದರ ಬದುಕಿನ ಹಕ್ಕನ್ನು ಗೌರವಿಸುವುದು ನಾಟಕ ಅನಾವರಣಗೊಳಿಸುವ ಜೀವನ ಮೌಲ್ಯಗಳು. ಪಟ್ಲ ಸಂತೋಷ ನಾಯಕ್‌ರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕದಲ್ಲಿ ವಿದ್ಯಾರ್ಥಿಗಳ ಮನೋಜ್ಞ ಅಭಿನಯ ಜೀವಂತಿಕೆ ತುಂಬುವಲ್ಲಿ ಸಫ‌ಲವಾಯಿತು. ಉತ್ತಮ ರಂಗಸಜ್ಜಿಕೆ, ಬೆಳಕಿನ ಸಂಯೋಜನೆ ನಾಟಕಕ್ಕೆ ವಿಶೇಷ ಮೆರಗು ತಂದವು.

ಸುವರ್ಣ ಪರ್ವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ನಾಟಕ ಚೋರ ಚರಣದಾಸ. ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ಕಾಲೇಜು ವಿದ್ಯಾರ್ಥಿ ಕಾರ್ತಿಕ್‌ ನಿರ್ದೇಶಿಸಿ ನಟಿಸಿದ ನಾಟಕ ಮೆಚ್ಚುಗೆಗೆ ಪಾತ್ರವಾಯಿತು. ಮೂಲದಲ್ಲಿ ರಾಜಸ್ಥಾನಿ ಜನಪದ ಕತೆಯನ್ನು ನಾಟಕವಾಗಿ ರೂಪಾಂತರಿಸಿದವರು ಹಬೀಬ್‌ ತನ್ವೀರ್‌. ಕನ್ನಡಕ್ಕೆ ಅನುವಾದಿಸಿ ರೂಪಾಂತರಿಸಿದವರು ಡಾ| ಸಿದ್ಧಲಿಂಗ ಪಟ್ಟಣ ಶೆಟ್ಟಿ. ಒಬ್ಬ ಪ್ರಾಮಾಣಿಕ ಕಳ್ಳ ತನ್ನ ಜೀವನವನ್ನು ತ್ಯಜಿಸಿ, ಜೀವನ ಮೌಲ್ಯಗಳನ್ನು ಅಮರಗೊಳಿಸುತ್ತಾನೆ. ಸಾಮಾನ್ಯ ವ್ಯಕ್ತಿಯಾಗಿದ್ದ ನಾಟಕದ ನಾಯಕ ಸತಕ್ಕಾಗಿ ಜೀವ ಬೀಡುವುದೇ ನಾಟಕದ ಕಥಾವಸ್ತು. ಹಿತಮಿತವಾದ ರಂಗೋಪಕರಣಗಳ ಬಳಕೆ, ಬೆಳಕಿನ ಸಂಯೋಜನೆ ರಂಗಗೀತೆಗಳ ಹಿನ್ನಲೆ ಹಳೆ ವಿದ್ಯಾರ್ಥಿ ತಂಡದ ಮನೋಜ್ಞ ಅಭಿನಯದ ಮೂಲಕ ನಾಟಕ ಚಿರಸ್ಥಾಯಿಯಾಗುವಲ್ಲಿ ಯಶಸ್ವಿಯಾಯಿತು. ಹಲವು ವರ್ಷಗಳಿಂದ ಶಾಲೆಯಲ್ಲಿ ಪ್ರಬುದ್ಧ ನಿರ್ದೇಶಕರಿಂದ ನಿರ್ದೇಶಿಸಲ್ಪಟ್ಟ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು, ಇದರ ಪ್ರತಿಫ‌ಲವೆಂಬತೆ ಕೆಲವೇ ದಿನಗಳ ತರಬೇತಿಯಿಂದ ರೂಪುಗೊಂಡ ಚೋರ ಚರಣದಾಸ ನಾಟಕ ಮನತಟ್ಟಿತು. ಶಶಿಪ್ರಭಾ ಕಾರಂತ ಮತ್ತು ಡಾ| ಪ್ರತಿಮಾ ಜಯಪ್ರಕಾಶ್‌ ನಾಟಕವನ್ನು ಸಂಯೋಜಿಸಿದರು.

ದೇವದಾಸ್‌ ಶೆಟ್ಟಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.