Udayavni Special

ನಿನ್ನ ದನಿಗಾಗಿ, ನಿನ್ನ ಕರೆಗಾಗಿ, ನಿನ್ನ ಸಲುವಾಗಿ ಕಾಯುವೆ


Team Udayavani, Feb 25, 2020, 5:08 AM IST

majji-14

ಈಗ ರಜೆಗೆಂದು ಊರಿಗೆ ಹೋದವಳು ನನ್ನನ್ನು ಮರೆತೆಯಾ? ನೀನು ಆಡಿದ ಮಾತುಗಳನ್ನೆ ಮರೆತೆಯಾ? ನಿಜವಾಗಿಯೂ ನನ್ನನ್ನು ಪ್ರೀತಿಸಿದ್ದೆಯಾ? ಅಪ್ಪ -ಅಮ್ಮನ ಕಟ್ಟಳೆಯಲ್ಲಿರುವ ಕಾರಣದಿಂದ ಫೋನ್‌ ಮಾಡದೆ, ಮೆಸೇಜ್‌ ಕಳಿಸದೆ ಉಳಿದಿದ್ದೀಯ? ಅಥವಾ ನನ್ನನ್ನು ಮರೆತೇ ಬಿಟ್ಟೆಯಾ?

ಪಾಚು,
ನಿನಗೆ ನೆನಪಿದೆಯಾ, ನಾವಿಬ್ಬರೂ ಕೂಡಿ ಓಡಾಡಿದ ಜಾಗ, ತಿಂದ ತಿನಿಸು, ಆಡಿದ ಮಾತು, ಒಬ್ಬರಿಗೊಬ್ಬರು ಕಾದು ನಿಂತ ಘಳಿಗೆ ಎಲ್ಲವೂ ಕನಸೇನೋ ಎನಿಸ ಹತ್ತಿದೆ. ನನಗಾಗಿ ನೀನು, ನಿನಗಾಗಿ ನಾನು ಆ ಬ್ರಹ್ಮ ಬರೆದಾಯಿತು ಎಂದು ಹಾಡನ್ನು ಗುನುಗುತ್ತಲೇ ನಿನ್ನನ್ನು ಕಾತರದಿಂದ ಕಾಣಲು ಬರುತ್ತಿದ್ದೆ. ನಿನಗಾದರೂ ಅಷ್ಟೇ, ಕಣ್ಣಲ್ಲಿ ಕಾತರ, ಮನದಲ್ಲಿ ತವಕ ಇರುತ್ತಿತ್ತಾದರೂ ಏನೊಂದೂ ಇರದಂತೆ ತೋರಿಸಿ ಕೊಳ್ಳಲು ಎಚ್ಚರ ವಹಿಸುತಿದ್ದೆ. ಅದೊಂದು ದಿನ ಪಾರ್ಕ್‌ನಲ್ಲಿ ಜೊತೆಗೂಡಿ ಹೊರಟಾಗ ಮೆಲ್ಲನೆ ನೀನು ನನ್ನ ಕೈ ಹಿಡಿದುಕೊಂಡೆ. ನನಗೆ ಅದು ಅನಿರೀಕ್ಷಿತವಾಗಿತ್ತು. ಕೈ ಬಿಡಿಸಿಕೊಳ್ಳಲು ನೋಡಿದೆ. ನಿನ್ನ ಬಲವಂತದ ಹಿಡಿತದ ಮುಂದೆ ನಾನು ಸುಮ್ಮನಾಗಬೇಕಾಯಿತು. “ಯಾಕೆ, ಕೈ ಹಿಡೀಬಾರದಿತ್ತಾ?’ ನಿನ್ನ ಪ್ರಶ್ನೆಗೆ ಯಾರಾದ್ರೂ ನೋಡಿದ್ರೆ… ಎಂದು ಭಯದಿಂದಲೇ ಹೇಳಿದ್ದೆ. ಆ ಮಾತು ಕೇಳಿ-ಗಂಡಸಾಗಿ ಹುಟ್ಟಿ ಹೆದರಿಕೋತಿಯಲ್ಲೋ ಎಂದು ಹೇಳಿದವಳೇ ಪಕಪಕನೇ ನಕ್ಕಿದ್ದೆ. ಆ ನಗುವನ್ನು, ನನಗೇಕೋ ಇನ್ನೂ ಮರೆಯಲು ಸಾಧ್ಯವಾಗಿಲ್ಲ.

ಸಿನಿಮಾಕ್ಕೆಂದು ಹೋದಾಗ ಇಬ್ಬರೂ ಮೈಗೆ ಮೈ ಅಂಟಿಸಿಕೊಂಡು ಕೂತಾಗಲೂ ಅಷ್ಟೇ. ಹಿಂದು ಮುಂದು ಎನೂ ನೋಡದೇ ನೀನೊಬ್ಬಳೇ ಜೋರಾಗಿ ಮಾತನಾಡುತಿದ್ದೆ. ನಿನ್ನೊಂದಿಗೆ ಅನೇಕ ಬಾರಿ ಒಂಟಿಯಾಗಿ ಸಿಕ್ಕಿದ್ದೇನೆ. ಎಂದೂ ಸಭ್ಯತೆಯ ಗೆರೆಯನ್ನು ಮೀರಲಿಲ್ಲ. ಐ ಲವ್‌ ಯೂ ಕಣೋ ಎಂದು ಹೃದಯ ತುಂಬಿ ಹೇಳಿದಾಗ ನನಗೊಂದು ಧನ್ಯತಾಭಾವ.

ಆದರೆ, ಈಗ ರಜೆಗೆಂದು ಊರಿಗೆ ಹೋದವಳು ನನ್ನನ್ನು ಮರೆತೆಯಾ? ನೀನು ಆಡಿದ ಮಾತುಗಳನ್ನೆ ಮರೆತೆಯಾ? ನಿಜವಾಗಿಯೂ ನನ್ನನ್ನು ಪ್ರೀತಿಸಿದ್ದೆಯಾ? ಅಪ್ಪ -ಅಮ್ಮನ ಕಟ್ಟಳೆಯಲ್ಲಿರುವ ಕಾರಣದಿಂದ ಫೋನ್‌ ಮಾಡದೆ, ಮೆಸೇಜ್‌ ಕಳಿಸದೆ ಉಳಿದಿದ್ದೀಯ? ಅಥವಾ ನನ್ನನ್ನು ಮರೆತೇ ಬಿಟ್ಟೆಯಾ? ಅಂತಹದ್ದೊಂದು ಸಂಶಯ ಮೂಡಿ ಬೇಡವೆಂದರೂ ಮನಸು ಅಳತೊಡಗಿದೆ. ನಿನ್ನ ಫೋನ್‌ ಯಾವಾಗಲೂ ಸ್ವಿಚ್‌ ಆಫ್. ಅಪರೂಪಕ್ಕೆ ಚಾಲೂ ಇದ್ದರೂ ಕರೆ ಸ್ವೀಕಾರ ಮಾಡುತ್ತಿಲ್ಲ. ನಿನ್ನ ಒಂದು ಕರೆಗಾಗಿ, ಪ್ರೀತಿಯ ಮಾತಿಗಾಗಿ, ಮಧುರ ಧ್ವನಿಗಾಗಿ ಕಾತರದಿಂದ ಕಾಯುತಿದ್ದೇನೆ.

ದಯವಿಟ್ಟು ಕರೆ ಸ್ವೀಕರಿಸಿ, ಮನದ ಭಾರ ಇಳಿಸಲಾರೆಯಾ? ಪ್ಲೀಸ್‌!

ಭೋಜರಾಜ ಸೊಪ್ಪಿಮಠ

ಟಾಪ್ ನ್ಯೂಸ್

talakaveri

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ: ಕುಂಡಿಕೆಯಲ್ಲಿ ಸ್ನಾನಕ್ಕಿರಲಿಲ್ಲ ಅವಕಾಶ

fgftht

ಶೀಘ್ರವೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ : ವಿಕ್ಕಿ ಕೌಶಲ್

ಮಹಾಮಳೆಗೆ ತತ್ತರಿಸಿದ ಕೇರಳ: 15 ಮಂದಿ ಸಾವು, ಹಲವರು ನಾಪತ್ತೆ! ನೆರವಿನ ಭರವಸೆ ನೀಡಿದ ಶಾ

ಮಹಾಮಳೆಗೆ ತತ್ತರಿಸಿದ ಕೇರಳ: 15 ಮಂದಿ ಸಾವು, ಹಲವರು ನಾಪತ್ತೆ! ನೆರವಿನ ಭರವಸೆ ನೀಡಿದ ಶಾ

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

1-rerrr

ಹೊಳೆ ದಾಟಿದ ಮೇಲೆ ಅಂಬಿಗ ಏನೋ ಆದ: ಅನ್ಸಾರಿ ವಿರುದ್ಧ ಶರವಣ ಆಕ್ರೋಶ

cm-b-bommai

ಉಪಚುನಾಣೆ ತಮಗೆ ಪ್ರತಿಷ್ಠೆಯ ಪ್ರಶ್ನೆಯಲ್ಲ: ಸಿಎಂ ಬಸವರಾಜ್ ಬೊಮ್ಮಾಯಿ

PM Narendra Modi to visit Kedarnath on November 5, inaugurate several projects

ಹಲವು ಯೋಜನೆಗಳ ಉದ್ಘಾಟಣೆಗಾಗಿ ಕೇದಾರನಾಥಕ್ಕೆ ಪ್ರಧಾನ ಮಂತ್ರಿಗಳ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

ಹೊಸ ಸೇರ್ಪಡೆ

ಪುತ್ತೂರು: ಸಂಯುಕ್ತ ಖಾಝಿ ನೇಮಕ ಸಂಬಂಧಿಸಿ ನಡೆದ ಸಭೆಯಲ್ಲಿ ಹೊ-ಕೈ, ನೂಕುನುಗ್ಗಲು

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: 49ನೇ ವಾರ್ಷಿಕ ನವರಾತ್ರೋತ್ಸವ ಸಂಪನ್ನ

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: 49ನೇ ವಾರ್ಷಿಕ ನವರಾತ್ರೋತ್ಸವ ಸಂಪನ್ನ

talakaveri

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ: ಕುಂಡಿಕೆಯಲ್ಲಿ ಸ್ನಾನಕ್ಕಿರಲಿಲ್ಲ ಅವಕಾಶ

fgftht

ಶೀಘ್ರವೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ : ವಿಕ್ಕಿ ಕೌಶಲ್

ಮಹಾಮಳೆಗೆ ತತ್ತರಿಸಿದ ಕೇರಳ: 15 ಮಂದಿ ಸಾವು, ಹಲವರು ನಾಪತ್ತೆ! ನೆರವಿನ ಭರವಸೆ ನೀಡಿದ ಶಾ

ಮಹಾಮಳೆಗೆ ತತ್ತರಿಸಿದ ಕೇರಳ: 15 ಮಂದಿ ಸಾವು, ಹಲವರು ನಾಪತ್ತೆ! ನೆರವಿನ ಭರವಸೆ ನೀಡಿದ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.