ಅಷ್ಟಮಿ ಹಬ್ಬಕ್ಕಾಗಿ ಅವಲಕ್ಕಿ ವೈವಿಧ್ಯ

Team Udayavani, Aug 23, 2019, 5:38 AM IST

ಅಷ್ಟಮಿ ಬಂತೆಂದರೆ ಸಾಮಾನ್ಯವಾಗಿ ಶ್ರೀಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯ ನೆನಪಾಗುತ್ತದೆ. ಅವಲಕ್ಕಿಯನ್ನು ಉಪಯೋಗಿಸಿ ಬಹಳ ಸುಲಭವಾಗಿ ಸಿಹಿಯನ್ನು ತಯಾರಿಸಬಹುದು.

ಅವಲಕ್ಕಿ ಪೊಂಗಲ್‌
ಬೇಕಾಗುವ ಸಾಮಗ್ರಿ: ದಪ್ಪ ಅವಲಕ್ಕಿ- ಅರ್ಧ ಕಪ್‌, ಹೆಸರುಬೇಳೆ- ಅರ್ಧ ಕಪ್‌, ಬೆಳ್ತಿಗೆ ಅಕ್ಕಿ- ಅರ್ಧ ಕಪ್‌, ಹಾಲು- ಒಂದು ಕಪ್‌, ಬೆಲ್ಲದಪುಡಿ- ಅರ್ಧ ಕಪ್‌, ತೆಂಗಿನತುರಿ- ಎಂಟು ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿತರಿ- ಆರು ಚಮಚ, ಏಲಕ್ಕಿಪುಡಿ- ಅರ್ಧ ಚಮಚ, ಶುಂಠಿ ಮತ್ತು ಕಾಳುಮೆಣಸಿನಪುಡಿ- ಒಂದು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಹೆಸರುಬೇಳೆ ಮತ್ತು ಅಕ್ಕಿಯನ್ನು ಬೇರೆಬೇರೆಯಾಗಿ ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಎರಡು ಕಪ್‌ನಿàರು ಮತ್ತು ಒಂದು ಕಪ್‌ ಹಾಲು ಸೇರಿಸಿ ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿ. ಅವಲಕ್ಕಿಯನ್ನು ಇಪ್ಪತ್ತು ನಿಮಿಷ ನೆನೆಸಿ ನೀರು ಬಸಿದಿಡಿ. ಬಾಣಲೆಯಲ್ಲಿ ಬೆಲ್ಲಕ್ಕೆ ಸ್ವಲ್ಪ ನೀರುಹಾಕಿ ಕರಗಿಸಿ, ಇದಕ್ಕೆ ಶುಂಠಿತರಿ, ಕಾಳುಮೆಣಸಿನಪುಡಿ ಮತ್ತು ತೆಂಗಿನತುರಿಗಳನ್ನು ಸೇರಿಸಿ, ಕುದಿಸಿ. ನಂತರ, ಇದಕ್ಕೆ ಬೇಯಿಸಿಟ್ಟ ಹೆಸರಿನ ಮಿಶ್ರಣ ಮತ್ತು ಅವಲಕ್ಕಿ ಇತ್ಯಾದಿಗಳನ್ನು ಸೇರಿಸಿ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿಕೊಂಡು ಸಣ್ಣ ಉರಿಯಲ್ಲಿ ಕುದಿಸಿ. ಇದು ಚೆನ್ನಾಗಿ ಹೊಂದಿಕೊಂಡ ಮೇಲೆ ಏಲಕ್ಕಿಪುಡಿ ಮತ್ತು ಡ್ರೈಪ್ರೊಟ್ಸ್‌ ಗಳನ್ನು ಹಾಕಿ ಮಿಶ್ರಮಾಡಿ ಒಲೆಯಿಂದ ಇಳಿಸಿ.

ಪೋಹ
ಬೇಕಾಗುವ ಸಾಮಗ್ರಿ: ದಪ್ಪ ಅವಲಕ್ಕಿ- ಒಂದು ಕಪ್‌, ಚಿಕ್ಕದಾಗಿ ಹೆಚ್ಚಿದ ಆಲೂಗಡ್ಡೆ ಮತ್ತು ಕ್ಯಾರೆಟ್‌- ಅರ್ಧ ಕಪ್‌, ಹುಣಸೆ, ಬೆಲ್ಲ ಮತ್ತು ಉಪ್ಪು ಸೇರಿಸಿ ಗಿವುಚಿದ ರಸ- ಕಾಲು ಕಪ್‌, ಹಸಿಮೆಣಸು- ಒಂದು, ಪೋಹ ಮಸಾಲ- ಎರಡು ಚಮಚ, ಅರಸಿನ- ಕಾಲು ಚಮಚ, ಶುಂಠಿತರಿ- ಎರಡು ಚಮಚ, ಇಂಗು- ಅರ್ಧ ಚಮಚ, ಖಾರಪುಡಿ- ಅರ್ಧ ಚಮಚ, ತೆಂಗಿನ ತುರಿ- ಎಂಟು ಚಮಚ, ತುಪ್ಪದಲ್ಲಿ ಹುರಿದ ಗೋಡಂಬಿ- ಹತ್ತು, ಹೆಚ್ಚಿದ ನೀರುಳ್ಳಿ- ಒಂದು, ಟೊಮೆಟೋ- ಒಂದು ಬೇಕಿದ್ದರೆ.

ತಯಾರಿಸುವ ವಿಧಾನ: ದಪ್ಪ ಅವಲಕ್ಕಿಯನ್ನು ಸ್ವಚ್ಚಗೊಳಿಸಿ ಇಪ್ಪತು ನಿಮಿಷ ನೆನೆಸಿ, ನೀರು ಬಸಿದಿಡಿ. ಬಾಣಲೆಯಲ್ಲಿ ಒಂದು ಚಮಚ ತುಪ್ಪ ಮತ್ತು ಎರಡು ಚಮಚ ಎಣ್ಣೆಹಾಕಿ ಸಾಸಿವೆ, ಉದ್ದಿನಬೇಳೆ, ಕೆಂಪುಮೆಣಸು, ಹಾಗೂ ಕರಿಬೇವು ಸೇರಿಸಿದ ಒಗ್ಗರಣೆ ಸಿಡಿಸಿ ಇದಕ್ಕೆ ಇಂಗಿನ ಪುಡಿ, ಹಸಿಮೆಣಸು, ಶುಂಠಿತರಿ ಇತ್ಯಾದಿಗಳನ್ನು ಹಾಕಿ ಬಾಡಿಸಿ. ನಂತರ, ಇದಕ್ಕೆ ಹೆಚ್ಚಿಟ್ಟ ತರಕಾರಿಗಳನ್ನು ಸ್ವಲ್ಪ ಅರಸಿನ ಸೇರಿಸಿ ಬೇಯುತ್ತಾ ಬರುವಾಗ ಉಪ್ಪು, ಖಾರಪುಡಿ, ಹುಣಸೆರಸ, ಪೋಹ ಮಸಾಲ, ತೆಂಗಿನತುರಿ ಇತ್ಯಾದಿಗಳನ್ನು ಸೇರಿಸಿ, ಇದು ಕುದಿಯುತ್ತಿರುವಾಗ ನೆನೆಸಿಟ್ಟ ಅವಲಕ್ಕಿಯನ್ನು ಸೇರಿಸಿ, ಸ್ವಲ್ಪ ನೀರು ಸೇರಿಸಿ ಮಿಶ್ರಮಾಡಿಕೊಂಡು ಸಣ್ಣ ಉರಿಯಲ್ಲಿ ಐದು ನಿಮಿಷ ಚೆನ್ನಾಗಿ ಹೊಂದಿಕೊಳ್ಳುವಂತೆ ಕುದಿಸಿ, ಒಲೆಯಿಂದ ಇಳಿಸಿ, ತುಪ್ಪದಲ್ಲಿ ಹುರಿದ ಗೋಡಂಬಿಯಿಂದ ಅಲಂಕರಿಸಿ.

ಅವಲಕ್ಕಿ ಉಂಡೆ
ಬೇಕಾಗುವ ಸಾಮಗ್ರಿ: ದಪ್ಪ ಅವಲಕ್ಕಿ- ಅರ್ಧ ಕಪ್‌, ಗೋಧಿಹಿಟ್ಟು- ಅರ್ಧ ಕಪ್‌, ಹೆಸರುಬೇಳೆ- ಆರು ಚಮಚ, ತುಪ್ಪ- ನಾಲ್ಕು ಚಮಚ, ಕೊಬ್ಬರಿ ತುರಿ- ಅರ್ಧ ಕಪ್‌, ಬೆಲ್ಲ- ಎರಡು ಕಪ್‌, ಏಲಕ್ಕಿ- ಕಾಲು ಚಮಚ, ತುಪ್ಪದಲ್ಲಿ ಹುರಿದ ಗೋಡಂಬಿತರಿ, ದ್ರಾಕ್ಷಿ- ಆರು ಚಮಚ, ಹುರಿದ ಶೇಂಗಾತರಿ- ಅರ್ಧ ಕಪ್‌.

ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ ಗೋಡಂಬಿತರಿ, ಕೊಬ್ಬರಿ, ದ್ರಾಕ್ಷಿ ಇತ್ಯಾದಿಗಳನ್ನು ಪ್ರತ್ಯೇಕವಾಗಿ ಹುರಿದು ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ, ಅದೇ ಬಾಣಲೆಯಲ್ಲಿ ಎರಡು ಚಮಚ ತುಪ್ಪಹಾಕಿ ಗೋಧಿಹುಡಿಯನ್ನು ಹಸಿವಾಸನೆ ಹೋಗುವವರೆಗೂ ಹುರಿದು ಮಿಕ್ಸಿಂಗ್‌ ಬೌಲ್‌ಗೆ ಸೇರಿಸಿ. ಹೆಸರುಬೇಳೆಯನ್ನು ಹುರಿದು ನುಣ್ಣಗೆ ಪುಡಿಮಾಡಿ, ಪುಡಿಮಾಡಿಟ್ಟ ಅವಲಕ್ಕಿಯ ಜೊತೆ ಮಿಕ್ಸಿಂಗ್‌ ಬೌಲ್‌ಗೆ ಸೇರಿಸಿ ಮಿಶ್ರಮಾಡಿ. ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಪಾಕಕ್ಕೆ ಇಡಿ. ಪಾಕ ಗಟ್ಟಿಯಾಗುತ್ತಾ ಬರುವಾಗ ಸ್ವಲ್ಪ ಪಾಕವನ್ನು ನೀರಿಗೆ ಹಾಕಿದಾಗ ತಳದಲ್ಲಿ ಪಾಕ ನಿಲ್ಲಬೇಕು ಒಲೆಯಿಂದ ಇಳಿಸಿ ಏಲಕ್ಕಿಪುಡಿ ಮತ್ತು ಕೊಬ್ಬರಿತುರಿ ಸೇರಿಸಿ. ಮಿಕ್ಸಿಂಗ್‌ ಬೌಲ್‌ಗೆ ಬೇಕಾದಷ್ಟು ಪಾಕ ಸೇರಿಸಿಕೊಂಡು ಮಿಶ್ರಮಾಡಿ ತುಪ್ಪ ಸೇರಿಸಿಕೊಂಡು ಉಂಡೆಕಟ್ಟಿ.

ಅವಲಕ್ಕಿ ಪಾಯಸ
ಬೇಕಾಗುವ ಸಾಮಗ್ರಿ: ನೆನೆಸಿದ ದಪ್ಪ ಅವಲಕ್ಕಿ- ಎರಡು ಕಪ್‌, ತೆಂಗಿನ ಹಾಲು- ಎರಡು ಕಪ್‌, ಅಕ್ಕಿಹಿಟ್ಟು- ಎರಡು ಚಮಚ, ಬೆಲ್ಲ- ಎರಡು ಕಪ್‌, ಏಲಕ್ಕಿಪುಡಿ- ಒಂದು ಚಮಚ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ- ಆರು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬೆಲ್ಲಕ್ಕೆ ಅರ್ಧ ಕಪ್‌ ನೀರು ಹಾಕಿ ಒಲೆಯ ಮೇಲಿಡಿ. ಇದು ಕರಗಿದ ಮೇಲೆ ದಪ್ಪ ಅವಲಕ್ಕಿಯನ್ನು ನೀರಿನಿಂದ ತೆಗೆದು ಇದಕ್ಕೆ ಸೇರಿಸಿ ಒಂದು ಕಪ್‌ ತೆಂಗಿನ ಹಾಲು ಹಾಗೂ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಬೇಯಿಸಿ. ನಂತರ, ಇದಕ್ಕೆ ಗಂಟುಗಳಿಲ್ಲದಂತೆ ಕರಗಿಸಿದ ಅಕ್ಕಿಹಿಟ್ಟು ಸೇರಿಸಿ ಸಣ್ಣ ಉರಿಯಲ್ಲಿ ಮಗುಚುತ್ತಾ ಬೇಯಿಸಿ, ನಂತರ ಇದಕ್ಕೆ ಉಳಿದ ತೆಂಗಿನಹಾಲು, ಉಪ್ಪು, ಗೋಡಂಬಿದ್ರಾಕ್ಷಿ ಸೇರಿಸಿ ಚೆನ್ನಾಗಿ ಮಗುಚಿ ಬಿಸಿಯಾದ ಕೂಡಲೆ ಒಲೆಯಿಂದ ಇಳಿಸಿ ಏಲಕ್ಕಿ ಪುಡಿ ಸೇರಿಸಿ. ಈಗ ಸರ್ವ್‌ ಮಾಡಲು ರೆಡಿ.

ಗೀತಸದಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ