ಬಿಜೆಪಿಯಿಂದ ಲಸಿಕೆ ರಾಜಕಾರಣ: ಮಾಜಿ ಸಚಿವ ಅಭಯ ಚಂದ್ರ ಆರೋಪ

Team Udayavani, Aug 31, 2021, 8:48 PM IST

fcgtrre

ಮೂಡುಬಿದಿರೆ: ಸರ್ವೋಚ್ಛ ನ್ಯಾಯಾಲಯವು ದೇಶದ ಎಲ್ಲ ಪ್ರಜೆಗಳಿಗೂ ಉಚಿತ ಕೋವಿಡ್ ಲಸಿಕೆ ನೀಡಬೇಕೆಂದು ತಾಕೀತು ಮಾಡಿದ್ದರಿಂದ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆಯೇ ಹೊರತು ಬಿಜೆಪಿ ಪ್ರೇರಿತ ಲಸಿಕೆ ನೀಡುವ ಕಾರ್ಯಕ್ರಮ ಎಂಬಂತೆ ಬಿಂಬಿಸಲಾಗುತ್ತಿರುವುದನ್ನು ಕಾಂಗ್ರೆಸ್ ಪಕ್ಷವು ಸ್ಪಷ್ಟವಾಗಿ ವಿರೋಧಿಸುತ್ತಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಆಕ್ರೋಶ ಹೊರಹಾಕಿದರು.

ಮಂಗಳವಾರ ತಾಲೂಕಿನಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಇದೊಂದು ತಮ್ಮ ಬಿಜೆಪಿ ಪಕ್ಷದ ಪ್ರಚಾರ ಕಾರ್ಯಕ್ರಮವಾಗಿ ಅಲ್ಲಲ್ಲಿ ಲಸಿಕೆ ಕೊಡಿಸುತ್ತಿರುವುದು ಖಂಡನೀಯ. ಈ ಪ್ರವೃತ್ತಿ ಮುಂದುವರಿದಲ್ಲಿ ಶಾಸಕರ ಕಚೇರಿ ಮುಂಭಾಗದಲ್ಲೇ ಪಕ್ಷ ಕಾರ್ಯಕರ್ತರೊಂದಿಗೆ ಧರಣಿ ಹೂಡುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು ಮಾತನಾಡಿ, ಆರೋಗ್ಯ ಕೇಂದ್ರ, ಪಂಚಾಯತ್ ಅಥವಾ ಶಾಲೆಯಲ್ಲಿ ಲಸಿಕೆ ನೀಡಬೇಕು. ಆದರೆ, ಎಲ್ಲೆಂದರಲ್ಲಿ ಲಸಿಕೆ ನೀಡುವ ಮೂಲಕ ಪ್ರಾಥಮಿಕ ಆರೋಗ್ಯ ನಿಯಮಗಳನ್ನು ನಿರ್ಲಕ್ಷಿಸಲಾಗಿದೆ; ಲಸಿಕೆ ನೀಡುವ ಕಾರ್ಯಕ್ರಮದ ಮೂಲಕವೂ ಪ್ರಚಾರಗಿಟ್ಟಿಸುತ್ತಿರುವ ಶಾಸಕರ ನಡೆ ಖಂಡನೀಯ’ ಎಂದರು.

ಪ್ರತಿಭಟನೆ ವೇಳೆ ಪುತ್ತಿಗೆ ಪಂಚಾಯತ್ ಅಧ್ಯಕ್ಷ ಪ್ರವೀಣ ಶೆಟ್ಟಿ ,ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಬ್ಲಾಕ್ ಕಾಂ. ಅಧ್ಯಕ್ಷ ವಲೇರಿಯನ್ ಸಿಕ್ವೇರ, ಪ್ರ. ಕಾರ್ಯದರ್ಶಿ ರತ್ನಾಕರ ಸಿ. ಮೊಯ್ಲಿ, ಸತೀಶ ಭಂಡಾರಿ, ಪುರಸಭಾ ಸದಸ್ಯರಾದ ಪಿ.ಕೆ. ಥಾಮಸ್, ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್, ಇಕ್ಬಾಲ್ ಕರೀಂ, ಪುರಂದರ ದೇವಾಡಿಗ, ಕೊರಗಪ್ಪ, ಮಹಿಳಾ ಕಾಂ. ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷೆ ಸವಿತಾ ಟಿ.ಎನ್. , ವಾಸುದೇವ ನಾಯಕ್ ಮೊದಲಾದವರಿದ್ದರು. ತಹಶೀಲ್ದಾರ್ ಪುಟ್ಟರಾಜು ಅವರಿಗೆ ಅಭಯಚಂದ್ರ ಸಹಿತ ಮುಖಂಡರು ಮನವಿ ಅರ್ಪಿಸಿದರು.

ಟಾಪ್ ನ್ಯೂಸ್

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

Lok Sabha Elections 6ನೇ ಹಂತ: ಶೇ.59.06ರಷ್ಟು ಮತದಾನ

Lok Sabha Elections 6ನೇ ಹಂತ: ಶೇ.59.06ರಷ್ಟು ಮತದಾನ

Bangladesh ಸಂಸದರ ಹತ್ಯೆ ಕೇಸ್‌: ಭಾರತಕ್ಕೆ ಢಾಕಾ ಅಧಿಕಾರಿಗಳ ತಂಡ

Bangladesh ಸಂಸದರ ಹತ್ಯೆ ಕೇಸ್‌: ಭಾರತಕ್ಕೆ ಢಾಕಾ ಅಧಿಕಾರಿಗಳ ತಂಡ

Elephant Census ಬಂಡೀಪುರದಲ್ಲಿ ಆನೆ ಗಣತಿ ಸಂಪನ್ನ

Elephant Census ಬಂಡೀಪುರದಲ್ಲಿ ಆನೆ ಗಣತಿ ಸಂಪನ್ನ

ರಾಜ್ಯದಲ್ಲಿ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ : ಅಶೋಕ್‌

ರಾಜ್ಯದಲ್ಲಿ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ : ಅಶೋಕ್‌

ಮೂಲ್ಕಿಯ ಡಾ| ಹಂಸರಾಜ್‌ ಶೆಟ್ಟಿ ಅವರಿಗೆ ಬ್ರಿಟನ್‌ನ ಎಂಬಿಇ ಪ್ರಶಸ್ತಿ

ಮೂಲ್ಕಿಯ ಡಾ| ಹಂಸರಾಜ್‌ ಶೆಟ್ಟಿ ಅವರಿಗೆ ಬ್ರಿಟನ್‌ನ ಎಂಬಿಇ ಪ್ರಶಸ್ತಿ

Quran ಅಪವಿತ್ರ ಆರೋಪ: ಪಾಕ್‌ನಲ್ಲಿ ಕ್ರಿಶ್ಚಿಯನ್‌ ವ್ಯಕ್ತಿ ಮೇಲೆ ಹಲ್ಲೆ

Quran ಅಪವಿತ್ರ ಆರೋಪ: ಪಾಕ್‌ನಲ್ಲಿ ಕ್ರಿಶ್ಚಿಯನ್‌ ವ್ಯಕ್ತಿ ಮೇಲೆ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂಲ್ಕಿಯ ಡಾ| ಹಂಸರಾಜ್‌ ಶೆಟ್ಟಿ ಅವರಿಗೆ ಬ್ರಿಟನ್‌ನ ಎಂಬಿಇ ಪ್ರಶಸ್ತಿ

ಮೂಲ್ಕಿಯ ಡಾ| ಹಂಸರಾಜ್‌ ಶೆಟ್ಟಿ ಅವರಿಗೆ ಬ್ರಿಟನ್‌ನ ಎಂಬಿಇ ಪ್ರಶಸ್ತಿ

8-dharmasthala

CM Siddaramaiah: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

Mangaluru; ಚರಂಡಿ ತೋಡಿಗೆ ಬಿದ್ದ ಆಟೋ ರಿಕ್ಷಾ; ಚಾಲಕ ಸಾವು

Mangaluru; ಚರಂಡಿ ತೋಡಿಗೆ ಬಿದ್ದ ಆಟೋ ರಿಕ್ಷಾ; ಚಾಲಕ ಸಾವು

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

Uppinangady: ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ

Uppinangady: ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ

Lok Sabha Elections 6ನೇ ಹಂತ: ಶೇ.59.06ರಷ್ಟು ಮತದಾನ

Lok Sabha Elections 6ನೇ ಹಂತ: ಶೇ.59.06ರಷ್ಟು ಮತದಾನ

Bangladesh ಸಂಸದರ ಹತ್ಯೆ ಕೇಸ್‌: ಭಾರತಕ್ಕೆ ಢಾಕಾ ಅಧಿಕಾರಿಗಳ ತಂಡ

Bangladesh ಸಂಸದರ ಹತ್ಯೆ ಕೇಸ್‌: ಭಾರತಕ್ಕೆ ಢಾಕಾ ಅಧಿಕಾರಿಗಳ ತಂಡ

38

Archery World Cup Stage 2: ವನಿತಾ ಕಾಂಪೌಂಡ್‌ ತಂಡಕ್ಕೆ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.