ಕ್ಲರ್ಕ್‌ ಆದ್ರೆ ಲಕ್‌


Team Udayavani, Jan 30, 2018, 1:30 PM IST

31-34.jpg

ರಾಷ್ಟ್ರೀಯ ಬ್ಯಾಂಕುಗಳು ವಿವಿಧ ಹುದ್ದೆಗಳಿಗೆ ಆಗಿಂದಾಗ್ಗೆ ಅರ್ಜಿ ಕರೆಯುತ್ತಲೇ ಇರುತ್ತವೆ. ಆ ಮೂಲಕ ಬ್ಯಾಂಕ್‌ ಉದ್ಯೋಗಿ ಆಗಬೇಕು ಎಂಬ ಹಂಬಲದ ಯುವಜನತೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಇದೀಗ ಈ ಬಾರಿ ಎಸ್‌ಬಿಐನ ಬ್ಯಾಂಕ್‌ ನೌಕರರಾಗಿ ಸೇವೆಸಲ್ಲಿಸಲು ದೇಶಾದ್ಯಂತ ಒಟ್ಟು 8301 ಜೂನಿಯರ್‌ ಸಹಾಯಕರ ಹುದ್ದೆಗಳಿಗೆ ಅರ್ಜಿ ಕರೆದಿದೆ…

ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕು ಅಂತ ತುಂಬಾ ಆಸೆ ಇದೆ. ಬ್ಯಾಂಕ್‌ ಕೆಲಸ ಆಗಿಬಿಟ್ರೆ ಲೈಫ್ ಲಾಂಗ್‌ ಬದುಕಿಗೆ ಭದ್ರತೆ ಸಿಗುತ್ತೆ. ಆದ್ರೆ ಎಷ್ಟು ಪರೀಕ್ಷೆ ಬರೆದ್ರೂ ಕೆಲಸವೇ ಸಿಗುತ್ತಿಲ್ಲ ಎಂದು  ಜನ  ಸಂಖ್ಯೆಯಲ್ಲಿ ಇದ್ದಾರೆ. ಇಷ್ಟಾದರೂ ಛಲ ಬಿಡದೆ ಮತ್ತೆ ಮತ್ತೆ ಪರೀಕ್ಷೆಗೆ ಸಿದ್ಧರಾಗುವ ಅಭ್ಯರ್ಥಿಗಳಿಗಾಗಿ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮತ್ತೂಂದು ಅವಕಾಶ ಒದಗಿಸಿದೆ.

    ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಸೇರಿದಂತೆ ರಾಷ್ಟ್ರದ ಹಲವು ಸ್ಟೇಟ್‌ ಬ್ಯಾಂಕುಗಳು ಎಸ್‌ಬಿಐನಲ್ಲಿ ವಿಲೀನವಾದ ತರುವಾಯ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಉದ್ಯೋಗಾವಕಾಶವನ್ನು ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ನೀಡುತ್ತಿದೆ. ದೇಶಾದ್ಯಂತ ಒಟ್ಟು 8,301 ಕಿರಿಯ ಸಹಾಯಕರನ್ನು (ಗ್ರಾಹಕ ಸೇವಾ ಮತ್ತು ಸೇಲ್ಸ್) ನೇಮಿಸಿಕೊಳ್ಳಲು ಮುಂದಾಗಿದೆ.

ಎಷ್ಟು ಹುದ್ದೆಗಳು?
ಕ್ಲರ್ಕ್‌ ಹುದ್ದೆಗೆ ಒಟ್ಟು 8,301 ಹುದ್ದೆಗಳಿವೆ.  ಅದರಲ್ಲಿ 7,200 ಹುದ್ದೆಗಳನ್ನು ಸಾಮಾನ್ಯ ಅಭ್ಯರ್ಥಿಗಳಿಗೆ ಮತ್ತು ಇನ್ನುಳಿದ 1,101 ಹುದ್ದೆಗಳನ್ನು ಹಿಂದುಳಿದವರಿಗೆ ಮೀಸಲಿಡಲಾಗಿದೆ. ಅಲ್ಲದೆ ಒಟ್ಟು ಹುದ್ದೆಗಳನ್ನು ರಾಜ್ಯವಾರು ವಿಂಗಡನೆ ಮಾಡಲಾಗಿದೆ. ಅದರಂತೆ ಕರ್ನಾಟಕದ ಪಾಲಿಗೆ 345 ಹುದ್ದೆಗಳಿವೆ. ಅದರಲ್ಲಿ ಸಾಮಾನ್ಯ ಹುದ್ದೆಗಳು 100 ಮತ್ತು ಹಿಂದುಳಿದವರಿಗೆ 245 ಹುದ್ದೆಗಳನ್ನು ಮೀಸಲಿಡಲಾಗಿದೆ.

ಅರ್ಹತೆ ಏನಿರಬೇಕು?
ಅಭ್ಯರ್ಥಿಗಳು ಜ.1ಕ್ಕೆ ಅನುಗುಣವಾಗಿ 20ರಿಂದ 28ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟರಿಗೆ ವಯೋಮಿತಿಯಲ್ಲಿ 5ವರ್ಷ ಸಡಿಲಿಕೆಯಿದೆ.ಅಲ್ಲದೆ ಪಿಡಬ್ಲೂಡಿಗೆ 10-15 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಆಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮನಾದ ವಿದ್ಯಾರ್ಹತೆ ಹೊಂದಿರಬೇಕು. ಇನ್ನು ಎಸ್‌ಬಿಐನ ಸಹಾಯಕ ಹುದ್ದೆಗೆ 11,765ರಿಂದ 31,450 ರೂ. ವೇತನವನ್ನು ನಿಗದಿ ಮಾಡಲಾಗಿದೆ.

ಆಯ್ಕೆ ಹೇಗಿರುತ್ತೆ?
ಕ್ಲರ್ಕ್‌ ಹುದ್ದೆಗೆ ಆನ್‌ಲೈನ್‌ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿ ಎರಡು ರೀತಿಯ ಪರೀಕ್ಷೆಗಳಿವೆ. ಒಂದು ಪ್ರಾಥಮಿಕ ಪರೀಕ್ಷೆ ಮತ್ತೂಂದು ಮುಖ್ಯಪರೀಕ್ಷೆ. ಪ್ರಾಥಮಿಕ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆ. ಪ್ರಾಥಮಿಕ ಪರೀಕ್ಷೆಗೆ ನೂರು ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಒಂದು ಗಂಟೆ ಕಾಲಮಿತಿಯಿರುತ್ತದೆ. ಇಂಗ್ಲಿಷ್‌ ಭಾಷೆ 30 ಪ್ರಶ್ನೆಗಳು-30 ಅಂಕ, ನ್ಯೂಮರಿಕಲ್ ಎಬಿಲಿಟಿ-35 ಪ್ರಶ್ನೆಗಳು- 35 ಅಂಕ, ರೀಸನಿಂಗ್‌ ಎಬಿಲಿಟಿ-35 ಪ್ರಶ್ನೆಗಳು-35 ಅಂಕಗಳಿರುತ್ತವೆ. ಒಟ್ಟು ನೂರು ಅಂಕಗಳಿಗೆ ಉತ್ತರಿಸಬೇಕಾಗುತ್ತದೆ.

ಮುಖ್ಯ ಪರೀಕ್ಷೆಗೆ 2ಗಂಟೆ 40 ನಿಮಿಷದ ಕಾಲಮಿತಿಯಿದ್ದು, ಋಣಾತ್ಮಕ 4/1 ಅಂಕಗಳು ಇರಲಿವೆ. ಸಾಮಾನ್ಯ ಮತ್ತು ಆರ್ಥಿಕ ಜ್ಞಾನ-50 ಪ್ರಶ್ನೆಗಳು-50 ಅಂಕ, ಸಾಮಾನ್ಯ ಇಂಗ್ಲಿಷ್‌ 40 ಪ್ರಶ್ನೆಗಳು- 40 ಅಂಕ, ಕ್ಯಾಂಟಿಟೇಟೀವ್‌ ಆಪ್ಟಿಟ್ಯೂಡ್‌- 50 ಪ್ರಶ್ನೆಗಳು- 50 ಅಂಕ, ರೀಸನಿಂಗ್‌ ಎಬಿಲಿಟಿ ಮತ್ತು ಕಂಪ್ಯೂಟರ್‌ ಆಪ್ಟಿಟ್ಯೂಡ್‌- 50 ಪ್ರಶ್ನೆಗಳು- 50 ಅಂಕ, ಒಟ್ಟು 190 ಅಂಕಗಳಿಗೆ ಉತ್ತರಿಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕಾಗಿದ್ದು, ಅರ್ಜಿ ಸಲ್ಲಿಕೆ ಮಾಡುವ ಮುನ್ನ ಅಗತ್ಯ ಪೂರಕ ದಾಖಲೆಗಳ ಸಾಫ್ಟ್ ಕಾಪಿಯನ್ನು ಒಂದು ಫೋಲ್ಡರ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಅರ್ಜಿ ಸಲ್ಲಿಸಲು ಮೊದಲು http://ibps.sifyitest.com/sbijacsjan18/ ಇಲ್ಲಿ ರಿಜಿಸ್ಟರ್‌ ಆಗಬೇಕು. ಬಳಿಕ ನೀವು ಸೇರಲಿರುವ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಅಗತ್ಯ ಮಾಹಿತಿ ನಮೂದಿಸಿ, ದಾಖಲೆಗಳನ್ನು ತುಂಬಿ, ಅರ್ಜಿ ಫೀಸನ್ನು ( ಸಾಮಾನ್ಯರಿಗೆ- 600 ರೂ, ಪರಿಶಿಷ್ಟರಿಗೆ- 100 ರೂ.) ಪಾವತಿಸಬೇಕು. ಅರ್ಜಿ ಹಾಕಲು ಫೆ.10 ಕೊನೆದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ https://www.sbi.co.in/webfiles/uploads/files/1516358303086_SBI_CLERICAL_ADV_ENGLISH.pdf

ಅನಂತನಾಗ್‌ ಎನ್‌.

ಟಾಪ್ ನ್ಯೂಸ್

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Karthik’s advice helped me when i was struggling without rhythm: Virat Kohli

RCB; ಲಯ ಇಲ್ಲದೆ ಒದ್ದಾಡುತ್ತಿದ್ದಾಗ ಕಾರ್ತಿಕ್‌ ಸಲಹೆಯಿಂದ ನೆರವು: ವಿರಾಟ್ ಕೊಹ್ಲಿ

Mysore; ಒಂದು ವರ್ಷದಿಂದ ಕಟ್ಟಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

Mysore; ಒಂದು ವರ್ಷದಿಂದ ಪಾವತಿಸಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

King Cobra: ಅಡುಗೆ ಕೋಣೆಯಲ್ಲಿ ಅವಿತು ಕುಳಿತ ದೈತ್ಯ ಕಾಳಿಂಗ ಸರ್ಪ, ಬೆಚ್ಚಿಬಿದ್ದ ಮನೆ ಮಂದಿ

King Cobra: ಅಡುಗೆ ಕೋಣೆಯಲ್ಲಿ ಅವಿತು ಕುಳಿತ ದೈತ್ಯ ಕಾಳಿಂಗ ಸರ್ಪ, ಬೆಚ್ಚಿಬಿದ್ದ ಮನೆ ಮಂದಿ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

Google Map Follow ಮಾಡಿ ಹಳ್ಳಕ್ಕೆ ದುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

Google Map Follow ಮಾಡಿ ಹೊಳೆಗೆ ಧುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

6-panaji

Panaji: ಪತ್ನಿಯನ್ನು ಕೊಂದ ಪತಿ; ಬಂಧನ

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

5-

ಗಾಂಜಾ ಸಾಗಾಟ; ತೀರ್ಥಹಳ್ಳಿಯಲ್ಲಿ ಇಬ್ಬರ ಬಂಧನ; 2 ಕೆಜಿ ಗಾಂಜಾ ವಶ

Karthik’s advice helped me when i was struggling without rhythm: Virat Kohli

RCB; ಲಯ ಇಲ್ಲದೆ ಒದ್ದಾಡುತ್ತಿದ್ದಾಗ ಕಾರ್ತಿಕ್‌ ಸಲಹೆಯಿಂದ ನೆರವು: ವಿರಾಟ್ ಕೊಹ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.