ಬಾರೆ ಬಂಗಾರ ಖಾಲಿ ಕುಂಡ್ರಾಕ ಆಗೋದಿಲ್ರಿ

Team Udayavani, Mar 11, 2020, 5:41 AM IST

bhare-bangara

ಶಾಲೆಯ ಎದುರು ಕುಳಿತಿರುವ ಹಣ್ಣು ಹಣ್ಣು ಮುದುಕಿಯ ಎದುರು ಹಣ್ಣಿನ ರಾಶಿಯಿತ್ತು. ಅದುರುವ ಕೈ-ಕುತ್ತಿಗೆಯ ಜೊತೆಗೇ ಆಕೆ ವ್ಯಾಪಾರಕ್ಕೆ ಕುಳಿತಿದ್ದಳು. ಈ ವಯಸ್ಸಿನಲ್ಲಿ ದುಡಿಯಬೇಕೇ ಅಂತ ಕೇಳಿದರೆ, ನಗುತ್ತಲೇ ಮಾತಿಗಿಳಿದರು…

ಕೆಲವರು, ನಾನು ದುಡಿದೇ ಉಣ್ಣುತ್ತೇನೆ ಎಂದು ಹಠಕ್ಕೆ ಬೀಳುತ್ತಾರೆ. ಮೈಯಲ್ಲಿ ಕಸುವು ಇರುವವರೆಗೂ ಕಾಯಕವೇ ದೇವರು ಅಂತ ನಂಬಿಕೊಂಡಿರುತ್ತಾರೆ, ಅಂಥವರಲ್ಲಿ ಹಣ್ಣು ಮಾರುವ ಶಾಂತವ್ವರೂ ಒಬ್ಬರು.

ರಾಮದುರ್ಗದ ಮಡ್ಡಿಗಲ್ಲಿಯ 75 ವರ್ಷದ ಶಾಂತವ್ವ ಭಜಂತ್ರಿಗೆ ಮೂವರು ಗಂಡು ಮಕ್ಕಳು ಮತ್ತು ಓರ್ವ ಹೆಣ್ಣುಮಗಳಿದ್ದಾರೆ. ಎಲ್ಲರೂ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ಈ ಅಜ್ಜಿ ಮಾತ್ರ, ನಿತ್ಯವೂ ಬಾರೆಹಣ್ಣು ಮಾರಲು, ಮಹಾಂತೇಶ ನಗರದ ಬಸವೇಶ್ವರ ಸ್ಕೂಲ್‌ ಬಳಿ ಬಂದು ಕೂರುತ್ತಾರೆ. ಸಣ್ಣಗೆ ಅದುರುವು ಗೋಣು, ಕೈಗಳು ಆಕೆಯ ಜೀವನಪ್ರೀತಿಯನ್ನು, ದುಡಿಯುವ ಛಲವನ್ನು ಕುಗ್ಗಿಸಿಲ್ಲ. ಯಾಕಜ್ಜೀ, ಈ ವಯಸ್ಸಿನಾಗ ವ್ಯಾಪಾರ ಅಂತ ಕೇಳಿದರೆ, “ಮನ್ಯಾಗಿ ಕುಂತ್ರ ಹೊತ್ತು ಹೋಗೋದಿಲ್ಲೋ ನನ್ನಪ್ಪ. ಹಣ್ಣು ಮಾರಾಟದಿಂದ ನನ್ನ ಜೀವನ ಸವಸೇನ್ರಿ. ಎಲ್ಲ ಮಕ್ಕಳನ್ನು ಓದಿಸಿ ಮದುವೆ ಮಾಡೇನ್ರಿ. ಈಗ ಅವರೆಲ್ಲ ಬ್ಯಾಡ ಅಂತಾರ್ರಿ… ಆದ್ರ, ನನಗೆ ಖಾಲಿ ಕುಂಡ್ರಾಕ ಆಗೋದಿಲ್ಲ, ಹಿಂಗಾಗಿ ಹಣ್ಣ ಮಾರತೇನ್ರೀ. ಸ್ವಲ್ಪ ದುಡ್ಡು ಬರತಾವ್ರಿ, ಹಂಗ ಶಾಲೆ ಮಕ್ಕಳ ಜೊತೆ ಟೈಮ್‌ ಕಳೆದದ್ದು ಗೊತ್ತಗೋದಿಲ್ರಿ. ಹಿಂಗಾಗಿ ಆರಾಮದೇನ್ರಿ…’ ಅಂತ ನಗುತ್ತಾರೆ.

ಒಂದು ಕೆ.ಜಿ.ಗೆ 20 ರೂ.
ಬಾರೇ ಹಣ್ಣುಗಳನ್ನು ತೊರಗಲ್‌ದಿಂದ ಪ್ರತಿ ಕಿಲೋಗೆ ರೂ.20 ರಂತೆ ಖರೀದಿಸುತ್ತಾರೆ ಶಾಂತವ್ವ. ಅವುಗಳನ್ನು ಶಾಲಾ ಮಕ್ಕಳಿಗೆ ಮಾರಿ, ದಿನಾಲು 80-100 ರೂ. ಆದಾಯ ಗಳಿಸುತ್ತಿದ್ದಾರೆ. ಮೊಮ್ಮಕ್ಕಳು ತಂದು ಕೊಡುವ ಊಟದ ಡಬ್ಬಿ ತಿಂದು, ಸಂಜೆಯವರೆಗೂ ಶಾಲೆಯ ಬಳಿಯೇ ಕುಳಿತಿರುತ್ತಾರೆ. ಸಂಜೆ ಮೊಮ್ಮಗ ಬಂದು ವಾಪಸ್‌ ಕರಕೊಂಡು ಹೊಗುತ್ತಾನೆ.

ಈ ಇಳಿ ವಯಸ್ಸಿನಲ್ಲಿಯೂ ಯಾವುದೇ ಖಾಯಿಲೆ, ಔಷಧಿಗಳು ಅಜ್ಜಿಯ ಹತ್ತಿರ ಸುಳಿದಿಲ್ಲದಿರುವುದಕ್ಕೆ, ಈಕೆಯ ಕಾಯಕ ನಿಷ್ಠೆಯೇ ಕಾರಣವಿರಬಹುದು. ಅರವತ್ತಾಯಿತು, ಆಯಾಸ, ಬೇಸರ ಎನ್ನುವವರ ಮಧ್ಯೆ, ಶಾಂತವ್ವರನ್ನು “ಭಲೇ ಅಜ್ಜಿ’ ಎನ್ನಲು ಅಡ್ಡಿಯಿಲ್ಲ.

-ಸುರೇಶ ಗುದಗನವರ

ಟಾಪ್ ನ್ಯೂಸ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಐವರು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಆರು ಜನರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

SUNಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

ಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಐವರು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಆರು ಜನರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.